ಮುಲ್ಕಿ:ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಜೊತೆಗೆ ಜೊತೆಗೆ ಧಾರ್ಮಿಕತೆಗೆ ಒತ್ತುಕೊಡುವ ಸಮಾಜ ಮುಖಿ ಕೆಲಸ ಕಾರ್ಯಗಳು ನಡೆಯುತ್ತಿದ್ದರೆ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.
ಕಟೀಲು ಸಮೀಪದ ಕೊಂಡೇಲದಲ್ಲಿ ದಿ| ಶಿವಣ್ಣ ಬಂಗೇರ ವೇದಿಕೆಯಲ್ಲಿ ಕಟೀಲು ಮೇಳದ ಐವತ್ತನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಕಲಾವಿದರಿಗೆ ಸಮ್ಮಾನ , ಗುರುವಂದನ, ಪ್ರತಿಭಾ ಪುರಸ್ಕಾರ ಯಕ್ಷಗಾನ ಬಯಲಾಟ ಕಾರ್ಯಕ್ರಮಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಸತೀಶ್ ಭಟ್ ಕಟೀಲು, ಡಾ| ಸೋಂದಾ ಭಾಸ್ಕರ ಭಟ್ ಕಟೀಲು, ಬಾಬಣ್ಣ ಶಿಬರಾಯ, ಉಮೇಶ್ ರಾವ್ ಎಕ್ಕಾರು, ವೈ, ಮಾಲತಿ, ವಾಸುದೇವ ಶೆಣೈ, ವೈ. ಗೋಪಾಲ ಶೆಟ್ಟಿ ರನ್ನು ಗುರುವಂದನ ಅಡಿಯಲ್ಲಿ ಗೌರವಿಸಲಾಯಿತು.
ಕಲಾವಿದರಾದ ಶ್ರೀಧರ ಪೂಜಾರಿ ಪಂಜಾಜೆ, ಶಶಿಧರ ಶೆಟ್ಟಿ ಪಂಜ, ಬಾಯರು ರಮೇಶ್ ಭಟ್, ನಾರಯಣ ಕುಲಾಲ್, ಗಣೇಶ ಚಂದ್ರ ಮಂಡಲ, ಆಶೋಕ ಆಚಾರ್ಯ ವೇಣೂರು ರನ್ನು ಗೌರವಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಟೀಲು ದೇವಳದ ಅರ್ಚಕ ಕೆ. ವೆಂಕರಮಣ ಆಸ್ರಣ್ಣ , ಕೆ. ಭುವನಾಭಿರಾಮ ಉಡುಪ, ದೇವಿ ಪ್ರಸಾದ್ ಶೆಟ್ಟಿ ಕೊಡೆತ್ತೂರು, ಧರ್ಮದರ್ಶಿ ವಿವೇಕಾನಂದ, ಹರೀಶ್ ಪೂಜಾರಿ ಉಲ್ಲಂಜೆ, ಡಾ.| ದಿಪೀಕಾ ಕಟೀಲು, ಪ್ರಸಾದ್ ಶೆಟ್ಟಿ , ಜಯರಾಮ ಮುಕ್ಕಾಲ್ದಿ , ಸುಶೀಲ ಶಿವಣ್ಣ ಬಂಗೇರ, ವಿಶ್ವನಾಥ ಎಸ್.ಬಂಗೇರ, ರಾಮ ಎಸ್. ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಸಂಘಟಕ ಮೋಹನ್ ಎಸ್ ಬಂಗೇರ ಸ್ವಾಗತಿಸಿದರು. ಭಾಸ್ಕರ ಭಟ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
28/04/2022 02:20 pm