ಮುಲ್ಕಿ : ಕನ್ನಡ, ಇಂಗ್ಲಿಷ್, ಕೊಂಕಣಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿದ ಸಾಹಿತಿ ಕೆ. ಗಣೇಶ ಮಲ್ಯರು ಸದಾ ಸ್ಮರಣೀಯರು ಎಂದು ಕಸಾಪದ ಮಾಜಿ ರಾಜ್ಯಧ್ಯಕ್ಷ ಡಾ| ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಅವರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ವಿಶ್ವ ಕೊಂಕಣಿ ಕೇಂದ್ರ ಮಂಗಳೂರಿನ ಸಹಯೋಗದೊಂದಿಗೆ ಹಿರಿಯ ಸಾಹಿತಿ ದಿ. ಕೆ.ಜಿ. ಮಲ್ಯರ ಸಂಸ್ಮರಣ ಕಾರ್ಯಕ್ರಮ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತಿ, ನಿವೃತ್ತ ಅಧ್ಯಾಪಕ ಉಮೇಶ್ ರಾವ್ ಎಕ್ಕಾರ್ ಅವರಿಗೆ ಕೆ.ಜಿ. ಮಲ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ, ಕೆ. ಈ. ಮಲ್ಯರ ಪತ್ನಿ ಲಕ್ಷ್ಮೀ ಮಲ್ಯ, ಜಿಎಸ್‌ಬಿ ಸಮಾಜ ಕಿನ್ನಿಗೋಳಿಯ ಅಧ್ಯಕ್ಷ ರಾಜೇಶ್ ನಾಯಕ್ ಉಪಸ್ಥಿರಿದ್ದರು.ಗೌರವ ಡಾಕ್ಟರೇಟ್ ಪಡೆದ ಡಾ| ಹರಿಕೃಷ್ಣ ಪುನರೂರು ಅವರನ್ನು ಗೌರವಿಸಲಾಯಿತು.
ಕೊಂಕಣಿ-ಕನ್ನಡ ಕವಿ ಗೋಷ್ಠಿಯಲ್ಲಿ ಹಿರಿಯ ಸಾಹಿತಿ ಉದಯ ಕುಮಾರ್ ಹಬ್ಬು, ಕಾ.ವೀ. ಕೃಷ್ಣ ದಾಸ, ದಯಾಮಣಿ ಶೆಟ್ಟಿ ಎಕ್ಕಾರು, ಕೃಷ್ಣಾನಂದ ಶೆಟ್ಟಿ ಐಕಳ, ಮನು ಕಷ್ಯಪ್ ಕಟೀಲು, ಯಶವಂತ ರಾವ್ ಕಿನ್ನಿಗೋಳಿ, ವತ್ಸಲಾ ಯೊಗೀಶ್ ರಾವ್ ಏಳಿಂಜೆ, ಜೊಸ್ಸಿ ಪಿಂಟೋ, ನವೀನ್ ಪಿರೇರಾ, ಡಾ|ಜೋಯೆಲ್ ನೊರೋನ್ಹಾ, ಎಡ್ಮಂಡ್ ನೊರೋನ್ಹಾ, ಜೋಯ್ಸ್ ಪಿಂಟೋ ಭಾಗವಹಿಸಿದ್ದರು. ಭುವನಾಭಿರಾಮ ಉಡುಪ ಸ್ವಾಗತಿಸಿದರು. ಜೋಸ್ಸಿ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಹೇಮಾಚಾರ್ಯ ವಂದಿಸಿದರು.
Kshetra Samachara
25/04/2022 06:00 pm