ಮುಲ್ಕಿ: ಮುಲ್ಕಿ ಸಮೀಪದ ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಶ್ರೀ ಜಾರಂದಾಯ ಹಾಗೂ ಬಂಟ ದೈವಗಳ ವರ್ಷಾವಧಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಎ.22,ಶುಕ್ರವಾರ ಸಾಯಂಕಾಲ ಕುಬೇರಗುತ್ತು ಮನೆಯಿಂದ ಭಂಡಾರ ಆಗಮನ ಹಾಗೂ ರಾತ್ರಿ ಧ್ವಜಾರೋಹಣ ದೀಪಾರಾಧನೆ ಬಲಿ ನಡೆಯಿತು.
ಎ.23 ಶನಿವಾರ ಮಧ್ಯಾಹ್ನ ಅನ್ನಸಂತರ್ಪಣೆ,ರಾತ್ರಿ ಶ್ರೀ ಜಾರಂದಾಯ ಹಾಗೂ ಬಂಟ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು. ಬೆಳಿಗ್ಗೆ ಧ್ವಜಾವರೋಹಣ, ಕುಬೇರಗುತ್ತುವಿಗೆ ಭಂಡಾರ ಹೊರಡುವುದು ಕಾರ್ಯಕ್ರಮ ನಡೆಯಿತು.
ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಬಿಜೆಪಿ ನಾಯಕರಾದ ಈಶ್ವರ್ ಕಟೀಲ್ ಕಸ್ತೂರಿ ಪಂಜ ಮತ್ತಿತರರು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ,ಕೆಂಚನಕೆರೆ,ಗೌರವಾಧ್ಯಕ್ಷ ಮುರಳೀಧರ್ ಭಂಡಾರಿ,ಅಶ್ವಿನ್ ಆಳ್ವ,ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಅವಿನಾಶ್ ಶೆಟ್ಟಿ ಶಿಮಂತೂರು,ದಿವಾಕರ ಶೆಟ್ಟಿ,ಶ್ರೀ ಜಾರಂದಾಯ ಮಿತ್ರ ಮಂಡಳಿ ಅಧ್ಯಕ್ಷ ಪ್ರಕಾಶ್ , ಮಾಜೀ ತಾ. ಪಂ.ಸದಸ್ಯ ಶರತ್ ಕುಬೆವೂರು, ಮಹಿಳಾ ಮಂಡಳಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಎ.24 ಭಾನುವಾರ ಸಂಜೆ 4 ಗಂಟೆಗೆ ಮಾಯಂದಾಲ ನೇಮೋತ್ಸವ ನಡೆಯಿತು.
ಮೇ.1 ದೈವಸ್ಥಾನದಲ್ಲಿ ಸಾರ್ವಜನಿಕ ಶನೈಶ್ವರ ಪೂಜೆ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ನಡೆಯಲಿದೆ.
Kshetra Samachara
24/04/2022 08:33 am