ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಿರಂತರ ಭಜನೆ;ಎರಡು ಸಾವಿರ ಮಂದಿ ಭಾಗಿ

ಕಟೀಲು :ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಎಪ್ರಿಲ್ 2ನೇ ತಾರೀಕಿನಿಂದ ಶ್ರೀ ರಾಮ ನವಮಿ ಹಾಗೂ ವರ್ಷಾವಧಿ ಜಾತ್ರೆಯ ಸಲುವಾಗಿ ನಡೆದ ನಿರಂತರ ಇಪ್ಪತ್ತು ದಿನಗಳ ಭಜನೆಯಲ್ಲಿ 175ಭಜನಾ ತಂಡಗಳು ಭಾಗವಹಿಸಿದ್ದು, ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.

ದಿನಂಪ್ರತಿ ಬೆಳಿಗ್ಗಿನಿಂದ ರಾತ್ರಿವರೆಗೆ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಅಲ್ಲದೆ ದೂರದ ಬೆಂಗಳೂರು(3 ತಂಡ) ಮುಂಬೈ(4ತಂಡ)ನಿಂದಲೂ ಭಜನಾ ತಂಡಗಳು ಭಾಗವಹಿಸಿದ್ದು, ಕನಿಷ್ಟ ಮೂರು ಜನರಿದ್ದ ತಂಡದಿಂದ ಎಂಭತ್ತು ಮಂದಿ ಇದ್ದ ಭಜನಾ ತಂಡಗಳೂ ಭಾಗವಹಿಸಿವೆ. ಬೆಂಗಳೂರು, ಮುಂಬೈನಿಂದ ಭಜನೆ ಸೇವೆಗಾಗಿಯೇ ತಂಡಗಳು ಕಟೀಲಿಗೆ ಬಂದು ಸೇವೆ ಸಲ್ಲಿಸಿವೆ. ಎರಡು ವರ್ಷಗಳ ಹಿಂದೆ ಬ್ರಹ್ಮಕಲಶದ ಸಂದರ್ಭ ನಿರಂತರ ಎರಡೂವರೆ ತಿಂಗಳ ಕಾಲ ನಡೆದ ಭಜನೆಯಲ್ಲಿ ಆರು ನೂರಕ್ಕೂ ಹೆಚ್ಚು ತಂಡಗಳ ಐದು ಸಾವಿರಕ್ಕೂ ಮಿಕ್ಕಿ ಭಾಗವಹಿಸಿದ್ದರು.  

ಇಪ್ಪತ್ತಕ್ಕೂ ಹೆಚ್ಚು ಕುಣಿತ ಭಜನಾ ತಂಡಗಳು ಸೇವೆ ಸಲ್ಲಿಸಿವೆ. ಭಜನೆ ಸೇವೆ ಸಲ್ಲಿಸಿದವರಿಗೆ ಪ್ರಸಾದವನ್ನಷ್ಟೇ ನೀಡಲಾಗುತ್ತಿದ್ದು, ಯಾವುದೇ ಸಂಭಾವನೆ ನೀಡಿಲ್ಲ. ಆದರೂ ದೂರದ ಊರುಗಳಿಂದ ವಾಹನಗಳಲ್ಲಿ ಬಂದು ಶ್ರೀ ದೇವೀ ಸನ್ನಿಧಿಯಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಿರುವ ಭಕ್ತರ ಸಂಖ್ಯೆ ಅದರಲ್ಲೂ ಮಹಿಳೆಯರ ಸಂಖ್ಯೆ ದೊಡ್ಡದು. ನಾಲ್ಕು ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುವುದು ವಿಶೇಷ. ಈ ಬಾರಿ ಅವಕಾಶ ಸಿಗದ ತಂಡಗಳಿಗೆ ಮುಂದಿನ ವಿಶೇಷ ದಿನಗಳಲ್ಲಿ ಅವಕಾಶ ನೀಡಲಾಗುತ್ತದೆ ಎಂದು ದೇಗುಲದ ಮೂಲಗಳು ತಿಳಿಸಿವೆ. 

Edited By : PublicNext Desk
Kshetra Samachara

Kshetra Samachara

21/04/2022 08:57 pm

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ