ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾ ಡಿ:ಶ್ರೀ ಧೂಮಾವತಿ ದೈವದ ನೂತನ ಅಣಿ ಸಮರ್ಪಣೆಯ ಭವ್ಯ ಮೆರವಣಿಗೆ

ಮುಲ್ಕಿ: ಕಿಲ್ಪಾಡಿ ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನ ದ ವಾರ್ಷಿಕ ಸಿರಿ ಸಿಂಗಾರ ನೇಮೋತ್ಸವ ದ ಪೂರ್ವಭಾವಿಯಾಗಿ ದಾನಿಗಳಾದ ಕುಚ್ಚಿಗುಡ್ಡೆ ಭಾರತಿ ವಾಮನ ಪೂಜಾರಿರವರು ದೈವಸ್ಥಾನಕ್ಕೆ ನೀಡಿದ ಶ್ರೀ ಧೂಮಾವತಿ ದೈವದ ನೂತನ ಅಣಿ ಸಮರ್ಪಣೆಯ ಮೆರವಣಿಗೆ ವಿಜ್ರಂಭಣೆಯಿಂದ ನಡೆಯಿತು.

ಈ ಸಂದರ್ಭ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರಂಗನಾಥ ಶೆಟ್ಟಿ, ಗೌರವಾಧ್ಯಕ್ಷ ಗೋಪಿನಾಥ ಪಡಂಗ, ಕಾರ್ಯಧ್ಯಕ್ಷ ಮಾಧವ ಪೂಜಾರಿ, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಯುವಕ ಮಂಡಲದ ಅಧ್ಯಕ್ಷ ಮೋಹನ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ, ಜೊತೆ ಕೋಶಾಧಿಕಾರಿ ವಿನಯ ವಿಶ್ವನಾಥ, ಮುಂಬೈ ಸಮಿತಿ ಅಧ್ಯಕ್ಷೆ ಪ್ರಭಾ ಕೆ. ಬಂಗೇರ, ಅರ್ಚಕ ಕೃಷ್ಣಪ್ಪ ಪೂಜಾರಿ, ಯಾದವ ಪೂಜಾರಿ, ಹರೀಶ್ ಅಮೀನ್, ಸಮಿತಿಯ ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.

ಎ.18ರಂದು ದೈವಸ್ಥಾನದಲ್ಲಿ ಶ್ರೀಕ್ಷೇತ್ರದ ನಾಗದೇವರಿಗೆ ವಿವಿಧ ಸೇವೆಗಳು, ಸಂಜೆ ತುಡರ ಬಲಿ, ಎ.19 ಮಂಗಳವಾರ ದೈವಸ್ಥಾನದಲ್ಲಿ ಚಪ್ಪರ ಮುಹೂರ್ತ, ಮಹಾ ಅನ್ನ ಸಂತರ್ಪಣೆ,ಉಳ್ಳಾಯ ದೈವದ ನೇಮೋತ್ಸವ, ಮೈಸಂದಾಯ ದೈವದ ನೇಮೋತ್ಸವ ನಡೆಯಲಿದೆ.

Edited By : PublicNext Desk
Kshetra Samachara

Kshetra Samachara

17/04/2022 07:52 pm

Cinque Terre

1.28 K

Cinque Terre

0

ಸಂಬಂಧಿತ ಸುದ್ದಿ