ಮುಲ್ಕಿ: ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ರವರು ಮಾಡಿದ ಕಾರ್ಯಗಳು ಕಾಲಕಾಲಕ್ಕೂ ಪ್ರಸ್ತುತವಾಗಿದ್ದು ಭಾರತದ ಪರಮೋಚ್ಚ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಸಾಧನೆ ಅನುಕರಣೀಯ ಎಂದು ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಹೇಳಿದರು.
ಅವರು ಹಳೆಯಂಗಡಿ ಗ್ರಾ ಪಂ ನಲ್ಲಿ ಡಾ. ಅಂಬೇಡ್ಕರ್ ರವರ ಜನ್ಮದಿನ ಆಚರಿಸಿ ಮಾತನಾಡಿದರು.ಈ ಸಂದರ್ಭ ಹಳೆಯಂಗಡಿ ಗ್ರಾಪಂ ಸದಸ್ಯ ಚಂದ್ರಕುಮಾರ್, ಅಬ್ದುಲ್ ಅಜೀಜ್, ಧನರಾಜ್ ಕೋಟ್ಯಾನ್, ಅಬ್ದುಲ್ ಖಾದರ್, ಸುಕೇಶ್, ಸವಿತಾ, ವಿನೋದ್ ಕುಮಾರ್ ಕೊಳುವೈಲು, ಚಂದ್ರಿಕಾ, ಸಿಬ್ಬಂದಿ ಪ್ರಮೀಳಾ, ಅಬ್ದುಲ್ ಸವಾದ್ ಉಪಸ್ಥಿತರಿದ್ದರು.
Kshetra Samachara
14/04/2022 10:47 am