ಮುಲ್ಕಿ: ಸರ್ಕಾರದ ಯೋಜನೆಗಳು ಮಧ್ಯವರ್ತಿಗಳು ಇಲ್ಲದೆ ನೇರವಾಗಿ ಜನಸಾಮಾನ್ಯರಿಗೆ ತಲುಪಿದಾಗ ಯೋಜನೆಯ ಸಾರ್ಥಕತೆ ಪಡೆಯಲು ಸಾಧ್ಯವೆಂದು ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿಯ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್ ಹೇಳಿದರು. ಕಿನ್ನಿಗೋಳಿ ಸಮೀಪದ ಪದ್ಮನೂರು ಶಾಲೆಯಲ್ಲಿ ಹೊಸಕಾವೇರಿ ಫ್ರೆಂಡ್ಸ್ ಸರ್ಕಲ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಆಶ್ರಯದಲ್ಲಿ ಜರಗಿದ ಉಚಿತ ಇ -ಶ್ರಮ್‌ಕಾರ್ಡ್ ನೋಂದಣಿ ಮಾಹಿತಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಪೃಥ್ವಿರಾಜ ಆಚಾರ್ಯ ಶಿಬಿರ ಉದ್ಘಾಟಿಸಿದರು.. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ನವೀನ್ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಐರಿನ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಯೋಜನೆಯ ವಿಶಾಲಾಕ್ಷಿ ಸ್ವಾಗತಿಸಿದರು. ಪ್ರವೀಣ್ ವಂದಿಸಿದರು. ಫ್ರೆಂಡ್ಸ್ ಸರ್ಕಲ್‌ನ ಸಚಿನ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 100 ಕ್ಕೂ ಮಿಕ್ಕಿ ಜನರು ಶಿಬಿರದ ಪ್ರಯೋಜನ ಪಡೆದರು.
Kshetra Samachara
11/04/2022 10:23 pm