ಮುಲ್ಕಿ: ಮುಲ್ಕಿ ಸಮೀಪದ ಬಪ್ಪನಾಡು ಶ್ರೀ ಕೋಟೆದ ಬಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಶನಿವಾರ ಮಧ್ಯಾಹ್ನ 12.30 ಗಂಟೆಗೆ ಚಪ್ಪರ ಮುಹೂರ್ತ, ಮಹಾ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆದು ರಾತ್ರಿ ಶ್ರೀ ಕೋಟೆದಬಬ್ಬು ಹಾಗೂ ತನ್ನಿಮಾನಿಗ ದೈವದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಮಂಡಲಾಧ್ಯಕ್ಷ ಸುನಿಲ್ ಆಳ್ವ ದಾಮೋದರ್ ಸಾಲ್ಯಾನ್, ಡಾ. ಬಿ ಪಿ ರಾವ್, ಕಿಶೋರ್ ಶೆಟ್ಟಿ ಬಪ್ಪನಾಡು, ದಿನೇಶ್ ದೇವಾಡಿಗ ಮತ್ತಿತರರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಭಾನುವಾರ ಸಂಜೆ ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ನಡೆಯಿತು. ದೈವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/04/2022 09:43 pm