ಮುಲ್ಕಿ: ಸಸಿಹಿತ್ಲು ಶ್ರೀಭಗವತಿ ಫ್ರೆಂಡ್ಸ್ ನ ವಾರ್ಷಿಕೋತ್ಸವ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಗವತಿ ದೇವಸ್ಥಾನದ ಅಧ್ಯಕ್ಷರಾದ ವಾಮನ್ ಇಡ್ಯಾ ವಹಿಸಿದ್ದರು. ಕಾರ್ಯಕ್ರಮವನ್ನು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ದೀಪ ಪ್ರಜ್ವಲನೆ ಮಾಡಿ ಮಾತನಾಡಿ ಗ್ರಾಮದಲ್ಲಿ ಸಂಘಟನೆ ಮೂಲಕ ಸಹಾಯಹಸ್ತ ಮಾಡುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಪ್ರಸಾದ್ ಅತರ್, ಗಣೇಶ್ ಅತರ್, ಶ್ರೀ ಭಗವತಿ ಫ್ರೆಂಡ್ಸ್ ನ ಗೌರವಾಧ್ಯಕ್ಷ ಅನಿಲ್ ಪೂಜಾರಿ, ಅಧ್ಯಕ್ಷ ಸಚಿನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಕ್ರೀಡಾ ಕ್ಷೇತ್ರದ ಸಾಧಕ ಸತೀಶ್ ಬೋಳಾರ್, ರಂಗಕರ್ಮಿ ಸಾಧಕರಾದ ಪರಮಾನಂದ ಸಾಲ್ಯಾನ್, ಜಗನ್ನಾಥ ಕೋಟ್ಯಾನ್ ರವರನ್ನು ಗೌರವಿಸಲಾಯಿತು. ಪ್ರದೀಪ್ ಎಸ್ ಆರ್ ಸ್ವಾಗತಿಸಿದರು. ಎಸ್. ಆರ್ ಪ್ರಭಾತ್ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
Kshetra Samachara
02/04/2022 06:39 pm