ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡು ನಲ್ಲಿ ರಾಜ್ಯಮಟ್ಟದ ಕೃಷಿ ಮೇಳದ ದಿ. ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಸಮಾರೋಪ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮೂಡಬಿದ್ರಿ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ರವರು ಆಶೀರ್ವಚನ ನೀಡಿ, "15ನೇ ಶತಮಾನಕ್ಕೂ ಮೊದಲೇ ಜಗತ್ತಿನಾದ್ಯಂತ ಇಲ್ಲಿನ ಸಾಂಬಾರ ಪದಾರ್ಥ, ಉಪ್ಪು, ಗಂಧಸಾಲೆ ಅಕ್ಕಿ ರವಾನೆಯಾಗುತ್ತಿತ್ತು. ಇದು ದಕ್ಷಿಣ ಕನ್ನಡ ಜಿಲ್ಲೆಯ ಸಾಧನೆ. ಮೂಲ್ಕಿ ಬಪ್ಪನಾಡಿನ ಡೋಲು, ಕಾಂತಾಬಾರೆ ಬೂದಾಬಾರೆ, ಆಗೋಳಿ ಮಂಜಣ್ಣ ಎಲ್ಲರೂ ಪ್ರಸಿದ್ಧರು. ಜಾನಪದ ಲೋಕಕ್ಕೆ ಮೂಲ್ಕಿ ಅನೇಕ ಕೊಡುಗೆಗಳನ್ನು ನೀಡಿದೆ. ನಮಗೆ ಉಸಿರಾಡಲು ಆಕ್ಸಿಜನ್ ಬೇಕು. ಆದರೆ ಇಂದು ಹಣಕೊಟ್ಟು ಅದನ್ನು ಖರೀದಿ ಮಾಡಬೇಕಾದ ಪರಿಸ್ಥಿತಿ ಒದಗಿಬಂದಿದೆ. ಇನ್ನು ಮುಂದೆ ಇಂತಹ ಪರಿಸ್ಥಿತಿ ಖಂಡಿತಾ ಬರುವುದು ಬೇಡ.ಮೂಲ್ಕಿಯಲ್ಲಿ ಜಲ ಸಮೃದ್ಧಿ ಇರುವ ಕಾರಣ ಸಸ್ಯ ಸಮೃದ್ಧಿಯಿದೆ. ನಮ್ಮ ಸಣ್ಣ ಮಕ್ಕಳಿಗೆ ಕೃಷಿಯ ಪ್ರೇರಣೆ ನೀಡುವ ಕೆಲಸ ನಡೆಯಬೇಕು. ಮಕ್ಕಳಿಗೆ ಕೃಷಿ ಬದುಕನ್ನು ಪರಿಚಯಿಸಬೇಕು ಎಂದರು.
ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಮಾತನಾಡಿ ಜನರು ಸಂಘಟಿತರಾದಾಗ ಮಾತ್ರ ಕೃಷಿ ಮೇಳದಂತಹ ಕಾರ್ಯಕ್ರಮ ನಡೆಯಲು ಸಾಧ್ಯ. ಕೃಷಿ ಮತ್ತು ಋಷಿ ಜೊತೆಯಾಗಿ ಸಾಗಿದಾಗ ಮಾತ್ರ ರಾಷ್ಟ್ರ ಉದ್ಧಾರವಾಗುವುದು ಎಂದರು/
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕ, ಉಮಾನಾಥ್ ಕೋಟ್ಯಾನ್ ವಹಿಸಿದ್ದರು.
ಕೃಷಿ ಮೇಳದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ರವರು ಕೃಷಿ ಮೇಳದ ಠರಾವನ್ನು ಶಾಸಕ ಉಮಾನಾಥ್ ಕೋಟ್ಯಾನ್ ರವರ ಮೂಲಕ ಸರಕಾರಕ್ಕೆ ಮಂಡಿಸಿದರು.
ವೇದಿಕೆಯಲ್ಲಿ ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯ ಕೆ. ಭುವನಾಭಿರಾಮ ಉಡುಪ, ಮೂಲ್ಕಿ ಸೀಮೆ ಅರಮನೆಯ ದುಗ್ಗಣ್ಣ ಸಾವಂತರು, ಕೃಷಿ ಮೇಳದ ಅಧ್ಯಕ್ಷ ವಿಜಯ ಶೆಟ್ಟಿ ಕೊಲ್ನಾಡ್, , ವಿನೋದ್ ಸಾಲಿಯಾನ್ ಬೆಳ್ಳಾಯರು, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ, ಮಹಿಮ್ ಹೆಗ್ಡೆ, ಜಗದೀಶ ಪೈ ಉಪಸ್ಥಿತರಿದ್ದರು.
ಆರ್.ಜೆ. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಮೇಳದ ವೇದಿಕೆಯಲ್ಲಿ ಕೃಷಿಯಲ್ಲಿ ಆವಿಷ್ಕಾರ ಮಾಡಿರುವ ಜನಾರ್ಧನ ಗೌಡ ಮೂಡಬಿದ್ರಿ, ಬಿ. ಕೆ. ದೇವರಾಯ ರಾವ್ ಬೆಳ್ತಂಗಡಿ, ಜೇನು ಕೃಷಿಯಲ್ಲಿ ಸಾಧನೆ ಮಾಡಿರುವ ಬಸವನ ಬಾಗೇವಾಡಿಯ ಮಹಾಂತೇಶ್ ಎನ್. ಚೌಧರಿ, ಕೃಷಿ ಕ್ಷೇತ್ರದ ಸಾಧನೆಗಾಗಿ ಚಿಕ್ಕಬಳ್ಳಾಪುರದ ಎಸ್. ಆರ್. ಎಸ್. ದೇವರಾಜ್, ಬೆಳ್ತಂಗಡಿಯ ವಿಠಲ ಶೆಟ್ಟಿ ತಾರೆಮಾರ್ ರವರನ್ನು ಸನ್ಮಾನಿಸಲಾಯಿತು.
Kshetra Samachara
13/03/2022 07:54 pm