ಮುಲ್ಕಿ: ಮಹಿಳೆಯರು ಶೈಕ್ಷಣಿಕವಾಗಿ , ಅರ್ಥಿಕವಾಗಿ ಸದೃಡರಾದಾಗ ಸಮಾಜದ ಅಭಿವೃದ್ದಿ ಸಾಧ್ಯವೆಂದು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಸಂಜೀವಿನಿ ಸಂಸ್ಥೆಯ ಸಂಚಾಲಕಿ ಅನಿತಾ ಫ್ರ್ಯಾಂಕ್ ಬಿ. ಎಸ್ ಹೇಳಿದರು.
ಕಿನ್ನಿಗೋಳಿ ರಾಜರತ್ನಪುರದ ವಿಶಗ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಶ್ರೀ ಕಾಳಿಕಾಂಬ ಮಹಿಳಾ ವೃಂದ ಕಿನ್ನಿಗೋಳಿ ಯ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜರಗಿದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಮಹಿಳಾ ದಿನಾಚರಣೆ ವರ್ಷಕ್ಕೆ ಒಂದು ದಿನ ಮಾತ್ರ ಸೀಮಿತವಾಗದಿರಲೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಂಡ್ಕೂರಿನ ರಂಗೋಲಿ ಕಲಾವಿದೆ ಪುಷ್ಪಾ ಸುಧಾಕರ ಆಚಾರ್ಯ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಕಾಳಿಕಾಂಬ ಮಹಿಳಾ ವೃಂದದ ಅಧ್ಯಕ್ಷೆ ಶುಭಾ ಕೇಶವ ಆಚಾರ್, ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ದ ಅಧ್ಯಕ್ಷ ಉದಯಕುಮಾರ್ ಆಚಾರ್ಯ, ಸರಾಪ್ ಅಣ್ಣಾಯ್ಯಾಚಾರ್ಯ ಸಭಾಭನ ಸಮಿತಿ ಅಧ್ಯಕ್ಷ ಪ್ರಥ್ವೀರಾಜ ಆಚಾರ್ಯ ಮತ್ತಿತರರು ಇದ್ದರು.
ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾತು. ಮಹಿಳಾ ವೃಂದದ ಅಧ್ಯಕ್ಷೆ ಶುಭಾ ಕೇಶವ ಆಚಾರ್ಯ ಸ್ವಾಗತಿಸಿದರು, ರೇಣುಕಾ ಹರೀಶ್ ವಂದಿಸಿದರು, ಜಯಲಕ್ಷ್ಮಿ ಉದಯ ಕುಮಾರ್ ಹಾಗೂ ಪ್ರತಿಮಾ ಪ್ರಕಾಶ್ ನಿರೂಪಿಸಿದರು.
Kshetra Samachara
10/03/2022 04:37 pm