ಮುಲ್ಕಿ: ಮುಲ್ಕಿ ಸಮೀಪದ ಕೊಲಕಾಡಿ ಶ್ರೀ ಕುಂಜಾರಗಿರಿ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಭಜನಾ ಮಂಡಳಿಗಳಿಂದ ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು.
ಪ್ರಾತಃಕಾಲ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಹಾಗೂ ದೇವಸ್ಥಾನದ ಅರ್ಚಕ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಲತಿಕಾ ಶಶಿಧರ್ ಶೆಟ್ಟಿ ಪಂಜಿನಡ್ಕ ರವರು ದೀಪ ಪ್ರಜ್ವಲನೆ ಮೂಲಕ ಆಹೋರಾತ್ರಿ ಭಜನೆಗೆ ಚಾಲನೆ ನೀಡಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಿನಾಥ ಪಡಂಗ, ಯುವಕ ಸಂಘದ ಅಧ್ಯಕ್ಷ ,ಅಣ್ಣು ಎಸ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಶಿವರಾತ್ರಿ ಅಂಗವಾಗಿ ಫೆ. 2 ಬುಧವಾರ ಭಜನೆ ಮತ್ತು ರಂಗಪೂಜೆ, ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಮಹಿಷಮರ್ದಿನಿ, ಫೆ. 3 ಗುರುವಾರ ಯುವಕ ಸಂಘದ ವತಿಯಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ , ಸಾಧಕರಿಗೆ ಗೌರವ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
Kshetra Samachara
01/03/2022 06:55 am