ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಶ್ರೀ ನಾಲ್ಕೂರು ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವ

ಮುಲ್ಕಿ: ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಸಂಬಂಧಿಸಿದ ಹಾಗೂ ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಬಾಂಧವರ ಸಾಮೂಹಿಕ ದೈವಾರಾಧನೆಯ ಏಕೈಕ ಸಾನಿಧ್ಯ ವಾದ ಪಡುಪಣಂಬೂರು ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನದಲ್ಲಿ ನೂತನ ಕಲ್ಲುರ್ಟಿ ದೈವದ ಪ್ರತಿಷ್ಠೆ ಹಾಗೂ ನೂತನ ಗುಡಿಯಲ್ಲಿ ಗುಳಿಗ ದೈವದ ಪುನರ್ ಪ್ರತಿಷ್ಠೆ ಕಾರ್ಯಕ್ರಮ ಹಾಗೂ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಕ್ಷೇತ್ರದ ನಾಗ ಸಾನ್ನಿಧ್ಯದಲ್ಲಿ ಪಂಚಾಮೃತ ಅಭಿಷೇಕ, ಅಶ್ವತ್ಥ ಪೂಜೆ, ಪುನರ್ ಪ್ರತಿಷ್ಠೆ ನಡೆದು ದೈವಗಳ ಸಾನಿಧ್ಯ ಅಭಿವೃದ್ಧಿಗೆ ನವಕ ಕಲಶ ಪ್ರಧಾನ, ಕಲಶಾಭಿಷೇಕ ,ದೈವಗಳಿಗೆ ಪರ್ವ ಕಾರ್ಯಕ್ರಮ ನಡೆಯಿತು.

ಅಪರಾಹ್ನ 12.30ಕ್ಕೆ ಶ್ರೀ ನಾಲ್ಕೂರು ಪಂಜೂರ್ಲಿ ಮತ್ತು ಪರಿವಾರ ದೈವಗಳ ಚಪ್ಪರ ಏರಿ ಭಂಡಾರ ಕೊಠಡಿಗೆ ಬರುವ ಕಾರ್ಯಕ್ರಮ ನಡೆಯಿತು. ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಪಂಜುರ್ಲಿ ದೈವದ ನೇಮೋತ್ಸವ ಕಲ್ಕುಡ-ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು

ಈ ಸಂದರ್ಭ ದೈವಸ್ಥಾನದ ಆಡಳಿತ ಮೊಕ್ತೇಸರರು ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/02/2022 11:56 am

Cinque Terre

2.94 K

Cinque Terre

0

ಸಂಬಂಧಿತ ಸುದ್ದಿ