ಮುಲ್ಕಿ: ಮುಲ್ಕಿ ಸಮೀಪದ ಕೆಂಚನಕೆರೆ ಅಂಗರಗುಡ್ಡೆ ಭಗತ್ ಸಿಂಗ್ ಯುವಕ ವೃಂದ ಹಾಗೂ ಮಹಿಳಾ ಮಂಡಳಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಭಜನಾ ಸಂಕೀರ್ತನೆ ದೇವರ ನಾಮಸ್ಮರಣೆಯೊಂದಿಗೆ ಶಿಮಂತೂರು ಶ್ರೀ ಆದಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ "ಜನಾರ್ದನ ನಡೆಗೆ ನಮ್ಮ ನಡಿಗೆ"ಪಾದಯಾತ್ರೆ ನಡೆಯಿತು.
ಶ್ರೀರಾಮ ಭಜನಾ ಮಂಡಳಿ ಅಂಗರಗುಡ್ಡೆ, ಶ್ರೀ ಆದಿ ಜನಾರ್ದನ ಭಜನಾ ಮಂಡಳಿ ಕುಬೇವೂರು, ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕುಣಿತ ಭಜನೆ ತಂಡ ದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಪಾದಯಾತ್ರೆ ನಡೆಯಿತು.
ಈ ಸಂದರ್ಭ ಶಿಮಂತೂರು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ,ಹರೀಶ್ ಶೆಟ್ಟಿ, ಮುಲ್ಕಿ ಪೊಲೀಸ್ ಠಾಣಾ ಎಎಸೈ ಚಂದ್ರಶೇಖರ್, ಭಗತ್ ಸಿಂಗ್ ಯುವಕ ವೃಂದ ಹಾಗೂ ಮಹಿಳಾ ಮಂಡಳಿ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
19/02/2022 10:46 am