ಮುಲ್ಕಿ: ವ್ಯಕ್ತಿಗಳ ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ದೇವರು ಮೆಚ್ಚುವಂತದ್ದು , ಯಾವುದೇ ಒಂದು ಕ್ಷೇತ್ರ ಧಾರ್ಮಿಕ ನೆಲೆಗಟ್ಟಿನ ಮೇಲೆ ನಿಂತಿರುವುದರಿಂದ ಧಾರ್ಮಿಕ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಹೇಳಿದರು
ಅವರು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಮಾರಿಪೂಜೆ ಪ್ರಯುಕ್ತ ದೈವದ ಸೇವೆ ಮಾಡುವ ಶೇಖರ ಮುಕಾಲ್ದಿ ಕೊಲ್ಲೂರು ರವರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭ ಚೇತನಾ ಮೊಹನ್ ದಾಸ್ ಲಿಂಗಪ್ಪ ಗೌಡ ರಾಮಕುಂಜ, ಅಶ್ವಥ್ ಶಾಂತಿಪಲ್ಕೆ, ಸುಮಾ ಆಚಾರ್ಯ ಉಳೆಪಾಡಿ, ಲಿಂಗಪ್ಪ ಮೂಲ್ಯ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/02/2022 08:12 am