ಕಾವೂರು:ಮಂಗಳೂರು ನಗರ ಉತ್ತರ ಕ್ಷೇತ್ರದ ಪಂಜಿಮೊಗರು 12 ನೇ ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ಶಾಸಕರ ನಿಧಿ ಹಾಗೂ ವಿವಿಧ ಇಲಾಖೆಗಳ ಮುಖಾಂತರ 70 ಲಕ್ಷ ರೂಪಾಯಿ ಅನುದಾನದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆಯನ್ನು ಶಾಸಕರಾದ ಡಾ.ಭರತ್ ಶೆಟ್ಟಿಯವರು ಸೋಮವಾರ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ 25 ಲಕ್ಷ ರೂ ವೆಚ್ಚದಲ್ಲಿ ಮಂಜೊಟ್ಟಿ ಅಂಗನವಾಡಿ ಬಳಿಯಿಂದ ಭಾಸ್ಕರ ಕೋಟ್ಯಾನ್ ಅವರ ಮನೆ ತನಕ ರಸ್ತೆ ಅಭಿವೃದ್ಧಿ, 20 ಲಕ್ಷ ರೂ ಅನುದಾನದಲ್ಲಿ ಪಂಜಿಮೊಗರುವಿನ ಐರಿನ್ ಅವರ ಮನೆಯಿಂದ ರಸ್ತೆ ಅಭಿವೃದ್ಧಿ, 15 ಲಕ್ಷ ರೂ ಅನುದಾನದಲ್ಲಿ ಜಾರುಂದಾಡಿ ಗುಡ್ಡೆಯ ಶ್ರೀಧರ್ ಅವರ ಮನೆಯಿಂದ ವೀರಪ್ಪ ಪೂಜಾರಿ ಅವರ ಮನೆ ಬಳಿ ಒಳಚರಂಡಿ ವಿಸ್ತರಣೆ, 5 ಲಕ್ಷ ರೂ ಅನುದಾನದಲ್ಲಿ ಕೆಜಿಕೆ ಬಳ್ಳಾಲ್ ರಸ್ತೆಯ ಶೀನಶೆಟ್ಟಿಯವರ ಮನೆಯಿಂದ ಕಂಬಳಗದ್ದೆಯ ತನಕ ಚರಂಡಿ ನಿರ್ಮಾಣ, 5 ಲಕ್ಷ ರೂ ಅನುದಾನದಲ್ಲಿ ಮೇಲ್ ಕೊಪ್ಪಳದ ಅಂಗನವಾಡಿ ಕೇಂದ್ರದ ಬಳಿ ತಡೆಗೋಡೆ ನಿರ್ಮಾಣದೊಂದಿಗೆ ಇತರ ಅಭಿವೃದ್ಧಿ ಕಾಮಗಾರಿಗಳಿಂದ ಸಮಗ್ರ ಅಭಿವೃದ್ಧಿಯತ್ತ ಪಂಜಿಮೊಗರು ವಾರ್ಡ್ ಸಾಗುತ್ತಿದೆ ಎಂದರು
ಜಿಲ್ಲಾ ಮಾಧ್ಯಮ ಪ್ರಮುಖ್ ರಣದೀಪ್ ಕಾಂಚನ್, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಶಾನವಾಜ್ , ಮಹಾ ಶಕ್ತಿ ಕೇಂದ್ರ ಕಾರ್ಯದರ್ಶಿ ಶೀತೇಶ್ ಕೊಂಡೆ, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
07/02/2022 03:29 pm