ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:29ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಶನೀಶ್ವರ ಪೂಜೆ

ಸುರತ್ಕಲ್: ಇಲ್ಲಿನ ರಥಬೀದಿಯ ನವದುರ್ಗ ಫ್ರೆಂಡ್ಸ್ ಸರ್ಕಲ್ (ರಿ) ವತಿಯಿಂದ 29ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಶನೀಶ್ವರ ಪೂಜೆ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಅಶ್ವತ್ಥಕಟ್ಟೆಯಲ್ಲಿ ಕ್ಷೇತ್ರದ ಅರ್ಚಕರಾದ ವೆಂಕಟ್ರಮಣ ಮಯ್ಯ ರವರ ನೇತೃತ್ವದಲ್ಲಿ ಗಣಪತಿ ಮಯ್ಯ ಮತ್ತು ಸಹೋದರರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪ್ರಾತಃಕಾಲ ವಿಶೇಷ ಪ್ರಾರ್ಥನೆ, ನವಕ ಕಲಶ, ಗಣಹೋಮ, ಅಶ್ವಥ ಪೂಜೆ ನಡೆಯಿತು

ಸಾಯಂಕಾಲ 5 ಗಂಟೆಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಶನೀಶ್ವರ ಪೂಜೆ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭ ಸಂಘಟನೆಯ ಗೌರವಾಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ, ಹರೀಶ್ ಶೆಟ್ಟಿಗಾರ್ ಪಡ್ಲಾಗಿ, ಕಾರ್ಯಾಧ್ಯಕ್ಷ ಅನಂತರಾಜ್ ಎಸ್, ಗೌರವ ಸಲಹೆಗಾರರಾದ ಮಹೇಶ್ ಮೂರ್ತಿ ಸುರತ್ಕಲ್, ಹರೀಶ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.

ಸುರತ್ಕಲ್ ಶ್ರೀ ವೀರಭದ್ರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರವರಿ 2ರಿಂದ 6ರವರೆಗೆ ನಡೆಯಲಿದೆ

Edited By : PublicNext Desk
Kshetra Samachara

Kshetra Samachara

23/01/2022 07:19 am

Cinque Terre

914

Cinque Terre

0

ಸಂಬಂಧಿತ ಸುದ್ದಿ