ಸುರತ್ಕಲ್: ಸುರತ್ಕಲ್ ಸಮೀಪದ ಕೃಷ್ಣಾಪುರ ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಸಹಕಾರದಲ್ಲಿ ಶ್ರೀ ಗಾಯತ್ರಿ ವಿಶ್ವಬ್ರಾಹ್ಮಣ ಮಹಿಳಾ ಸೇವಾ ಸಮಿತಿಯ ಸಹಭಾಗಿತ್ವದಲ್ಲಿ ಬಾಲಕಲಾವಿದರ ಪ್ರಥಮ ಯಕ್ಷಗಾನ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮವು ಸಂಘದ ಸಭಾಗೃಹದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಂಘದ ಅಧ್ಯಕ್ಷೆ ಸುಮತಿ ದಾಮೋದರ ಆಚಾರ್ಯ ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಪಿ.ಸದಾಶಿವ ಐತಾಳ್, ಹಿರಿಯ ಹಾಸ್ಯಕಲಾವಿದರಾದ ನಾರಾಯಣ ಹಾಸ್ಯಗಾರ್, ತಾಳಮದ್ದಲೆ ಅರ್ಥಧಾರಿಗಳಾದ ರಮೇಶ್ ಆಚಾರ್ಯ ಕಾವೂರು, ವಾಸುದೇವ ಆಚಾರ್ಯ, ಖ್ಯಾತ ಜ್ಯೋತಿಷಿ ಕೆಸಿ ನಾಗೇಂದ್ರ ಭಾರಧ್ವಜ್, ಸಣ್ಣನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಕುಲ್ ದಾಸ್, ಸಂಘದ ಗೌರವಧ್ಯಕ್ಷ ಪಿಕೆ ದಾಮೋದರ ಆಚಾರ್ಯ, ಅಧ್ಯಕ್ಷ ಭವಾನಿಶಂಕರ ಆಚಾರ್ಯ ಕುಮಾರಿ ಪವಿತ್ರಾ ಆಚಾರ್ಯ,ಶ್ರೀಮತಿದಾಮೋದರ್, ಸುಧಾವಿಶ್ವನಾಥ್ ,ಕುಮಾರಿ ಶಶಿರೇಖಾ, ಸುಧಾಕರ್ ಆಚಾರ್ಯ ಕುತ್ತೆತ್ತೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಗುರು ಜಿತೇಶ್ ಸೂರಿಂಜೆ ಹಾಗೂ ಹಿಮ್ಮೇಳದ ಭಾಗವತ ಪುಂಡಿಕಾಯ್ ಗೋಪಾಲಕೃಷ್ಣ ಭಟ್, ಮುರಾರಿ ಕದಂಬಡಿತ್ತಾಯ, ವಿಶ್ವನಾಥ್ ಶೆಣೈ, ಕೃಷ್ಣಪ್ರಸಾದ್ ಅವರುಗಳನ್ನು ಅಭಿನಂದಿಸಲಾಯಿತು.
Kshetra Samachara
17/01/2022 09:54 pm