ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ಳಾಯರು: ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಸಂಭ್ರಮ

ಮುಲ್ಕಿ:ಮುಲ್ಕಿ ಸಮೀಪದ ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ರಂಗ ಪೂಜಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಪ್ರಾತಃಕಾಲ ಶ್ರೀ ದೇವರ ಸನ್ನಿಧಿಯಲ್ಲಿ ಕ್ಷೇತ್ರದ ತಂತ್ರಿಗಳಾದ ಶಿವಪ್ರಸಾದ್ ತಂತ್ರಿ, ಅರ್ಚಕ ಗಣೇಶ್ ತಂತ್ರಿ ನೇತೃತ್ವದಲ್ಲಿ ಪ್ರಾರ್ಥನೆ ನಡೆದು ತೋರಣ ಪ್ರತಿಷ್ಠೆ, ಪುಣ್ಯಾಹ, ಪಂಚಗವ್ಯ, ನಾಲ್ಕು ಕಾಯಿ ಗಣಹೋಮ, ಕಲಶಾಧಿವಾಸ ಹೋಮ, 25 ಕಲಶ ಪ್ರತಿಷ್ಠಾ, ಪರಿವಾರ ದೇವತಾ ಕಲಶ ಪ್ರತಿಷ್ಠೆ ಕಾರ್ಯಕ್ರಮಗಳು ನಡೆಯಿತು.

ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ ಬಳಿಕ ಶ್ರೀ ದೇವರ ಉತ್ಸವ ಬಲಿ ಹೊರಟು ಪಲ್ಲ ಪೂಜೆ, ಸೇವಾಕರ್ತರಾದ ಸಂಜೀವಿ ನಾರಾಯಣ ಸಾಲಿಯಾನ್ ರವರ ಮಹಾ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭ ಆಡಳಿತ ಮೊಕ್ತೇಸರ ಪಾದೆ ಮನೆ ಜಯಂತ ರೈ, ಮೊಕ್ತೇಸರ ಶೇಖರ ಟಿ ಶೆಟ್ಟಿ, ಉಪಾಧ್ಯಕ್ಷ ರಾಮಚಂದ್ರ ನಾಯ್ಕ, ಕಾರ್ಯದರ್ಶಿ ಅನಂತರಾಮ ರಾವ್, ಕೋಶಾಧಿಕಾರಿ ರತ್ನಾಕರ ಶೆಟ್ಟಿಗಾರ್, ಕೃಷ್ಣರಾವ್, ಕಿರಣ್ ಶೆಟ್ಟಿ ಕೊಲ್ನಾಡು ಗುತ್ತು, ವಿದ್ಯಾಧರ್ ಶೆಟ್ಟಿ, ಪಡುಪಣಂಬೂರು ಗ್ರಾಪಂ ಉಪಾಧ್ಯಕ್ಷೆ ಕುಸುಮ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ರಾತ್ರಿ ರಂಗಪೂಜೆ, ಉತ್ಸವ ಬಲಿ ದರ್ಶನ ಬಲಿ ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.

Edited By : PublicNext Desk
Kshetra Samachara

Kshetra Samachara

17/01/2022 02:38 pm

Cinque Terre

2.24 K

Cinque Terre

0

ಸಂಬಂಧಿತ ಸುದ್ದಿ