ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡು: ಹರಿಹರ ಶ್ರೀವಿಷ್ಣುಮೂರ್ತಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಂಭ್ರಮದ ಧ್ವಜಾರೋಹಣ

ಮುಲ್ಕಿ: ಮುಲ್ಕಿ ಸಮೀಪದ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ಸರಳ ರೀತಿಯಲ್ಲಿ ನಡೆಯಿತು.

ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ರಂಗಪೂಜೆ ಬಲಿ ಉತ್ಸವ ಹಾಗೂ ಭೂತಬಲಿ ನಡೆಯಿತು.

ಭಾನುವಾರ ಮಧ್ಯಾಹ್ನ 11:00 ಗಂಟೆಗೆ ದೇವಸ್ಥಾನದಲ್ಲಿ ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಧ್ವಜಾರೋಹಣ ಹಾಗೂ ಮಹಾಪೂಜೆ ನಡೆಯಿತು.ರಾತ್ರಿ ಶ್ರೀ ದೇವರ ಉತ್ಸವ ಬಲಿ ಮಹಾಪೂಜೆ ಭೂತಬಲಿ ದೀಪದ ಬಲಿ ನಡೆಯಿತು.

ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಎಂಎಚ್ ಅರವಿಂದ ಪೂಂಜ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವಿಕುಮಾರ್, ಶಶೀಂದ್ರ ಎಂ ಸಾಲ್ಯಾನ್, ಟಿ. ರಾಘವೇಂದ್ರ, ಮುಲ್ಕಿ ನಪಂ ಸದಸ್ಯ ಹರ್ಷರಾಜ ಶೆಟ್ಟಿ, ಇಂಜಿನಿಯರ್ ಜೀವನ್ ಶೆಟ್ಟಿ, ಸುಂದರ್ ಶೆಟ್ಟಿ ಕುಬೆವೂರು, ವೈಎನ್ ಸಾಲ್ಯಾನ್, ಎಸ್ಕೆಪಿಎ ಮುಲ್ಕಿ ವಲಯದ ಅಧ್ಯಕ್ಷ ಶಿವರಾಮ್ ಸುವರ್ಣ ,ಹರಿಹರ ಕ್ಷೇತ್ರ ಯುವಕ ವೃಂದ ಹಾಗೂ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಜಾತ್ರಾ ಮಹೋತ್ಸವ ಜ.20 ರವರೆಗೆ ನಡೆಯಲಿದ್ದು ಸೋಮವಾರ ಕೆರೆ ದೀಪ, ಮಂಗಳವಾರ ಶಯನೋತ್ಸವ ಕವಾಟ ಬಂಧನ, ಬುಧವಾರ ಕವಾಟೋದ್ಘಾಟನೆ, ತುಲಾಭಾರ ಸೇವೆ, ರಾತ್ರಿ ಯಾತ್ರಾ ಬಲಿ, ಅವಭೃತ ಜಲಕದ ಬಲಿ, ಧ್ವಜಾವರೋಹಣ ನಡೆಯಲಿದೆ.

ಈ ಸಂದರ್ಭ ಆಡಳಿತ ಮೊಕ್ತೇಸರ ಅರವಿಂದ ಪೂಂಜಾ "ಪಬ್ಲಿಕ್ ನೆಕ್ಸ್ಟ್" ಜೊತೆ ಮಾತನಾಡಿ ಕೋವಿಡ್ ನಿಯಮಗಳ ಪ್ರಕಾರ ಜಾತ್ರಾ ಮಹೋತ್ಸವ ನಡೆಯಲಿದೆ ಎಂದರು.

Edited By : PublicNext Desk
Kshetra Samachara

Kshetra Samachara

16/01/2022 02:23 pm

Cinque Terre

2.13 K

Cinque Terre

0

ಸಂಬಂಧಿತ ಸುದ್ದಿ