ಮುಲ್ಕಿ: ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆ ಶ್ರೀ ವಿಠೋಬ ಭಜನಾ ಮಂದಿರದಲ್ಲಿ 63ನೇ ವಾರ್ಷಿಕ ಭಜನಾ ಮಂಗಲೋತ್ಸವ ವಿಜೃಂಭಣೆಯಿಂದ ನಡೆಯಿತು.
ಕಳೆದ ಡಿ. 13ರಿಂದ ಡಿ.15ರ ವರೆಗೆ ನಗರ ಸಂಕೀರ್ತನೆ ನಡೆದು ಜ 15ರ ಶನಿವಾರ ಅರ್ಚಕ ಸುರೇಶ್ ಭಟ್ ನೇತೃತ್ವದಲ್ಲಿ ಸೂರ್ಯೋದಯ ದಿನ ಮೊದಲ್ಗೊಂಡು ಸೂರ್ಯಾಸ್ತದವರೆಗೆ ಭಜನೆ, ಜಾಮ ಪೂಜೆ ಮತ್ತು ಮಂಗಲೋತ್ಸವ, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭ ಪಂಜ ಬಾಕಿಮಾರು ಗುತ್ತು ರಮೇಶ್ ಡಿ. ಶೆಟ್ಟಿ , ಅಮಿತ ಆರ್ ಶೆಟ್ಟಿ , ಮಂದಿರದ ಗೌರವಾಧ್ಯಕ್ಷ ಪಂಜದ ಗುತ್ತು ವಿಶ್ವನಾಥ ಶೆಟ್ಟಿ , ಅಧ್ಯಕ್ಷ ಸತೀಶ್ ಎಂ. ಶೆಟ್ಟಿ ಪಂಜ ಬೈಲಗುತ್ತು, ಸದಾನಂದ ಶೆಟ್ಟಿ , ದಯಾನಂದ ಶೆಟ್ಟಿ ಬಾಕಿಮಾರು ಗುತ್ತು, ಕರುಣಾಕರ ಶೆಟ್ಟಿ ಪಂಜದ ಗುತ್ತು, ಚಂದ್ರಹಾಸ ಎಂ. ಶೆಟ್ಟಿ ಪಂಜ ಮೊಗಪಾಡಿ, ಪದ್ಮನಾಭ ಪೂಜಾರಿ ಪಂಜ ಉಪಸ್ಥಿತರಿದ್ದರು.
ಜ.18 ಮಂಗಳವಾರ ನೂತನ ಭಜನಾಮಂದಿರದ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವ ನಡೆಯಲಿದ್ದು, ಬೆಳಿಗ್ಗೆ ಗಣಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಭಜನೆ, ಮಂಗಳಾರತಿ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ ಕಟೀಲು ಮೇಳದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ನಡೆಯಲಿದೆ.
Kshetra Samachara
15/01/2022 08:00 pm