ಮೂಡಬಿದ್ರೆ: ಕಳೆದ ಮೂರು ವರ್ಷಗಳಿಂದ ಕಟೀಲು ಜಾತ್ರೆ,ಮೂಡುಬಿದಿರೆ ಕಂಬಳದಲ್ಲಿ ವಿಶೇಷ ವೇಷ ಧರಿಸಿ ಅನಾರೋಗ್ಯ ಪೀಡಿತರು,ಆಶಕ್ತರಿಗೆ ಸಹಾಯ ಮಾಡುತ್ತಿರುವ ನೇತಾಜಿ ಬ್ರಿಗೇಡ್(ರಿ) ಸಂಸ್ತೆಯು ಮೂಡುಬಿದಿರೆಯಲ್ಲಿ ಜರಗಿದ 19ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ 3ನೇ ದ ಸೇವಾ ಕಾರ್ಯವಾಗಿ ಸಂಘಟನೆಯ ಸದಸ್ಯ ವಿಜೇಶ್ ಅಮೀನ್ ರವರು ವಿಶೇಷ ಧರಿಸಿ ಒಟ್ಟು1,44,923 ರೂ ಧನ ಸಂಗ್ರಹಿಸಿದ್ದಾರೆ.
ಮೂಡಬಿದ್ರೆಯ ಕೋಟಿ ಚೆನ್ನಯ್ಯ ಕಂಬಳದಲ್ಲಿ ನೇತಾಜಿ ಬ್ರಿಗೇಡ್ ನವರು ಸಂಗ್ರಹಿಸಿದ ರೂ 1.44 ಲಕ್ಷ ಹಣವನ್ನು ಅನಾರೋಗ್ಯ ಪೀಡಿತರು ಅಶಕ್ತರು ಸೇರಿದಂತೆ ಫಲನುಭಾವಿಗಳಿಗೆ ನೀಡುವ ಕಾರ್ಯಕ್ರಮವು ಡಿಸೆಂಬರ್ 18 ರ ಶನಿವಾರ ಸಂಜೆ
4.30ಕ್ಕೆ ಮೂಡಬಿದ್ರೆ ಕನ್ನಡ ಭವನದಲ್ಲಿ ಗಣ್ಯರ ಉಪಸ್ತಿತಿಯಲ್ಲಿ ನಡೆಯಲಿದೆಯೆಂದು ಸಂಘಟನೆ ತಿಳಿಸಿದೆ.
Kshetra Samachara
17/12/2021 10:06 pm