ಮುಲ್ಕಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮಿ ಜನಾರ್ಧನ ಮಹಾಗಣಪತಿ ದೇವಸ್ಥಾನದಲ್ಲಿ ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ವೇದಮೂರ್ತಿ ಗಣೇಶ್ ಭಟ್ ನೇತೃತ್ವದಲ್ಲಿ 'ಅಂಗಾರಿಕ ಸಂಕಷ್ಟಹರ ಪೂಜೆ' ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಾತಃಕಾಲ ವಿಶೇಷ ಪ್ರಾರ್ಥನೆ ನಡೆದು ಮಹಿಳಾ ಭಕ್ತರ ಸೇವಾರ್ಥ ವಾಗಿ 108 ತೆಂಗಿನಕಾಯಿ ಗಣಹೋಮ ನಡೆಯಿತು. ಸಂಜೆ 7 ಗಂಟೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ 8:45 ಗಂಟೆಗೆ ಚಂದ್ರೋದಯ ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆ ನಡೆದು ಶ್ರೀಮತಿ ಮತ್ತು ಶ್ರೀ ಪ್ರಭಾಕರ ಶೆಟ್ಟಿ ಏಳಿಂಜೆ ಕೋಂಜಾಲು ಗುತ್ತು ರವರ ಸೇವಾರ್ಥ ವಾಗಿ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಅನಿಲ್ ಶೆಟ್ಟಿ ಕೋಂಜಾಲು ಗುತ್ತು, ವರುಣ್ ಭಟ್, ಚಿತ್ರಂಜನ್ ಭಂಡಾರಿ, ಸ್ವರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/11/2021 11:19 am