ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ತಾಲೂಕು ಕಚೇರಿಯಲ್ಲಿ ಶ್ರೀ ನಾರಾಯಣ ಗುರು ಜನ್ಮ ದಿನಾಚರಣೆ

ಮುಲ್ಕಿ: ಮುಲ್ಕಿ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರದ ಆದೇಶದಂತೆ ಸರಳ ರೀತಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ ನಡೆಯಿತು.

ಕಾರ್ಯಕ್ರಮಕ್ಕೆ ಮುಲ್ಕಿ ತಹಶೀಲ್ದಾರ್ ಕಮಲಮ್ಮ ಚಾಲನೆ ನೀಡಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಾಲಿಸುವ ಮುಖಾಂತರ ಉತ್ತಮ ಆಡಳಿತ ನೀಡಿ ರಾಷ್ಟ್ರಕ್ಕೆ ಮಾದರಿಯಾಗೋಣ ಎಂದರು

ಈ ಸಂದರ್ಭ ಉಪ ತಹಶೀಲ್ದಾರ್ ಬಾಲಚಂದ್ರ ,ಕಂದಾಯ ನಿರೀಕ್ಷಕ ದಿನೇಶ್, ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಆಮೀನ್, ಮಾಜೀ ಅಧ್ಯಕ್ಷರುಗಳಾದ ಗೋಪಿನಾಥ ಪಡಂಗ.ಯಧೀಶ್ ಅಮೀನ್,ಡಾ. ಹರಿಶ್ಚಂದ್ರ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

23/08/2021 09:21 pm

Cinque Terre

1.97 K

Cinque Terre

0

ಸಂಬಂಧಿತ ಸುದ್ದಿ