ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಗೀಚುವ ಸಾಹಿತ್ಯದಿಂದ ಕನ್ನಡದ ಮಾನಹಾನಿ ಅಪಾಯ; ಡಾ. ನೆಗಳಗುಳಿ ಆತಂಕ

ಬಂಟ್ವಾಳ: ಸಾಹಿತ್ಯದ ಕೊಲೆ ಮಾಡುವ, ಸುಲಭದಲ್ಲಿ ಗೀಚಲಾಗುವ ಇಂದಿನ ವಿಚಿತ್ರ ಸಾಹಿತ್ಯ ಕನ್ನಡದ ಮಾನಹಾನಿಯ ಇನ್ನೊಂದು ಮಜಲಾಗುವ ಅಪಾಯವಿದೆ ಎಂದು ಬಂಟ್ವಾಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಸುರೇಶ ನೆಗಳಗುಳಿ ಆತಂಕ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳದ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದ ಆವರಣದಲ್ಲಿ ರಚಿಸಲಾದ ಏರ್ಯ ಲಕ್ಷ್ಮೀನಾರಾಯಣ ಆಳ್ವ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಘಟಕ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಹೀನತಮವಾದ ಭಾಷೆಯನ್ನು ಪ್ರಯೋಗಿಸಿ ಮಾನಖಂಡನೆಗಳನ್ನು ಸಾಹಿತ್ಯ ಅಸ್ತ್ರವಾಗಿ ಪ್ರಯೋಗಿಸುತ್ತಿರುವುದು, ಅವೆಲ್ಲ ಶೀಘ್ರವಾಗಿ ಸಾಂಕ್ರಾಮಿಕಗಳಾಗಿ ಹಲವರಿಂದ ಪರಸ್ಪರ ಹಂಚಲ್ಪಡುವುದರಿಂದ ಗಂಡಾಂತರ ನಿಶ್ಚಿತ ಎಂದರು.

ಇಂದು ತಾಂತ್ರಿಕತೆ ವಾಮ ಮಾರ್ಗಕ್ಕೆ ಸಹಕಾರಿಯಾಗಿದೆ. ಅಂಥವರು ಹಣ ತೆತ್ತು ನಕಲಿ ಡಾಕ್ಟರೇಟ್ ಪಡೆದವರಷ್ಟೇ ಅಸಹ್ಯಕಾರಿ ಎಂದರು. ಗಝಲ್ ಗಳ ರಚನೆ ಕೋವಿಡ್ ಕಾಲದಲ್ಲಿ ಹೆಚ್ಚಾಗಿ ಕಂಡುಬಂದವು. ಪತ್ರಿಕೋದ್ಯಮದಲ್ಲೂ ಪಕ್ವ ಸಾಹಿತಿಗಳು ಬೇಕು. ಇಂದು ಜಾಲತಾಣದ ಬಳಗಗಳು ಸಾಹಿತ್ಯ ರಚನೆಗೆ ಸ್ಫೂರ್ತಿ ಕೊಡುತ್ತಿವೆ ಎಂದರು.

Edited By : Nagaraj Tulugeri
Kshetra Samachara

Kshetra Samachara

21/02/2021 04:17 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ