ಮುಲ್ಕಿ: ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕವತ್ತಾರು ದಯಾನಂದ ಮತ್ತು ಕೋಟಿ ನಡ್ಕ ಸುರೇಶ್ ಹಾಗೂ ಜಲಯೋಧರ ಸಂಘ ಮತ್ತು ಲಯನ್ಸ್ ಕ್ಲಬ್ ಕರ್ನಿರೆ ಬಳಕುಂಜೆ ರವರ ಜಂಟಿ ಆಶ್ರಯದಲ್ಲಿ ಎರಡು ಹೊಳೆಗಳಿಗೆ ಸಾಂಪ್ರಾದಾಯಿಕ ಅಣೆಕಟ್ಟ ನಿರ್ಮಾಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕರ್ನಿರೆ ಬಳಕುಂಜೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲಯನ್ ನೆಲ್ಸನ್ ನೊರ್ಬರ್ಟ್ ಲೋಬೋ ಮಾತನಾಡಿ, ಹರಿಯುವ ನೀರಿಗೆ ಅಡ್ಡಲಾಗಿ ನಿರ್ಮಿಸಲಾದ ತಡೆಗೋಡೆಯಿಂದಾಗಿ ಅಂತರ್ಜಲ ಮಟ್ಟ ಏರಿಕೆ ಮತ್ತು ಹತ್ತಿರದ ಕೃಷಿ ಭೂಮಿಯಲ್ಲಿ ರೈತರಿಗೆ ನೀರಾವರಿಗಾಗಿ ಪ್ರೋತ್ಸಾಹ ನೀಡಿದಂತಾಗಿದೆ. ಯೋಜನೆಯಿಂದಾಗಿ ಸಮೀಪದ ಮನೆಗಳಲ್ಲಿ ಮೇ ತಿಂಗಳ ಕೊನೆಯವರೆಗೆ ಬಾವಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇರುವುದಿಲ್ಲ ಹಾಗೂ ಅಂತರ್ಜಲ ಮಟ್ಟ ಏರಿಕೆ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕರ್ನಿರೆ ಬಳಕುಂಜೆ ಕಾರ್ಯದರ್ಶಿ ಲ. ಸತೀಶ್ ಕುಮಾರ್ ಜಲಯೋಧ ಲ. ಪ್ರಾನ್ಸಿಸ್ ಮಿನೇಜಸ್, ಸದಸ್ಯರುಗಳಾದ ಲ. ಹರ್ಮನ್ ಆಸ್ಪಿನ್ ಸಿಕ್ವೇರಾ, ಲ. ಲ್ಯಾನ್ಸಿ ಪಿಂಟೋ, ಲ. ವಿನ್ಸೆಂಟ್ ಡಿ'ಸೋಜ, ಲ. ಚಂದ್ರಶೇಖರ ಶೆಟ್ಟಿ. ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/02/2021 03:53 pm