ಬಂಟ್ವಾಳ: ಜೈನ್ ಮಿಲನ್ ಬಂಟ್ವಾಳ ಮತ್ತು ಭಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ ಸಹಯೋಗದೊಂದಿಗೆ ಅವಿಭಜಿತ ದ.ಕ.ಜಿಲ್ಲೆ(ಮಂಗಳೂರು ವಿಭಾಗ ಮಟ್ಟದ)ಯ ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಜೈನ ಸಮುದಾಯದ ಸದಸ್ಯರು ಹಾಗೂ ಸಹಕಾರಿ ಕ್ಷೇತ್ರದ ಪ್ರತಿನಿಧಿಗಳ ಅಭಿನಂದನೆ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.
ಉಭಯ ಜಿಲ್ಲೆಯ ಸುಮಾರು 30 ಮಂದಿ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಜೈನ್ ಮಿಲನ್ ಬಂಟ್ವಾಳ ಅಧ್ಯಕ್ಷ ಡಾ. ಸುದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಜೈನ್ ಮಿಲನ್ ವಲಯ-8ರ ಅಧ್ಯಕ್ಷ ಪುಷ್ಪರಾಜ್ ಜೈನ್, ಉಪಾಧ್ಯಕ್ಷ ಸುದರ್ಶನ್ ಜೈನ್, ವಲಯ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಬಂಟ್ವಾಳ ಜೈನ ಸಮಾಜದ ಅಧ್ಯಕ್ಷ ಜಿನರಾಜ ಆರಿಗ ಪಚ್ಚಾಜೆಗುತ್ತು, ಮಂಗಳೂರು ವಿಭಾಗ ಭಾರತೀಯ ಜೈನ್ ಮಿಲನ್ ನಿರ್ದೇಶಕ ಧನ್ಯಕುಮಾರ್ ರೈ ಅತಿಥಿಗಳಾಗಿ ಭಾಗವಹಿಸಿದ್ದರು.
ಮೈಸೂರು ವರ್ಧಮಾನ್ ಜೈನ್ ಮಿಲನ್ ನ ಅಭಿನಂದನ್ ಕುಮಾರ್ ಅವರು ಅಭಿನಂದನೆ ಭಾಷಣ ಮಾಡಿದರು. ಮಿಲನ್ ನಿರ್ದೇಶಕರಾದ ಜಯರಾಜ್ ಕಂಬಳಿ, ರಾಜವರ್ಮ ಆರಿಗ, ಸೋಮಶೇಖರ್ ಶೆಟ್ಟಿ, ದೇವರಾಜ್ ವಗಕೆರೆ, ಮಹಾವೀರ್ ಹೆಗ್ಡೆ ಅಂಡಾರು, ಪ್ರಮೋದ್ ಕುಮಾರ್, ಧರ್ಮಪಾಲ ಹೆಗ್ಡೆ ಉಪಸ್ಥಿತರಿದ್ದರು.
ಸೀಮಂಧರ್ ಜೈನ್, ವಿಜಯಕುಮಾರಿ, ಗೀತಾ ಜಿನಚಂದ್ರ, ದಿವಾಕರ್ ಜೈನ್, ಅನನ್ಯ ಸನ್ಮಾನಿತರ ಪರಿಚಯ ಮಾಡಿದರು. ಬಂಟ್ವಾಳ ಜೈನ್ ಮಿಲನ್‌ನ ಆದಿರಾಜ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಸನ್ಮತಿ ಜಯಕೀರ್ತಿ ವಂದಿಸಿದರು. ಶಿವಪ್ರಕಾಶ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
29/01/2021 07:19 pm