ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿಜಯ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ಮುಲ್ಕಿ: ಮತದಾನ ನಮ್ಮ ಮೂಲಭೂತ ಹಕ್ಕಾಗಿದ್ದು, ದೇಶದ ಪ್ರಗತಿ ಮತ್ತು ಪ್ರಜೆಗಳ ಆಶೋತ್ತರಗಳಿಗೆ ಪೂರಕವಾಗಿ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಮುಲ್ಕಿ ವಿಜಯ ಕಾಲೇಜು ಪ್ರಾಂಶುಪಾಲ ಡಾ.ಕೆ. ನಾರಾಯಣ ಪೂಜಾರಿ ಹೇಳಿದರು.

ಮುಲ್ಕಿಯ ವಿಜಯ ಕಾಲೇಜಿನ ವೋಟರ್ ಲಿಟರೆಸಿ ಕ್ಲಬ್ ಹಾಗೂ ಎನ್ ಎಸ್ ಎಸ್ ಆಶ್ರಯದಲ್ಲಿ ಸೋಮವಾರ ವಿಜಯ ಕಾಲೇಜಿನಲ್ಲಿ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟ ಎಲ್ಲ ಯುವಕ-ಯುವತಿಯರು ಮತದಾನಕ್ಕೆ ನೋಂದಣಿ ಮಾಡಿಸಿ, ಮತದಾನದ ಹಕ್ಕನ್ನು ಚಲಾಯಿಸುವುದರೊಂದಿಗೆ ಇತರರಲ್ಲೂ ಮತದಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕೆಂದರು.

ಮುಲ್ಕಿ ನಪಂ ಸದಸ್ಯ ಬಾಲಚಂದ್ರ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಜಿತೇಂದ್ರ ವಿ. ರಾವ್ ಮತದಾನದ ಪ್ರಮಾಣ ವಚನ ಬೋಧಿಸಿ, ಕಾರ್ಯಕ್ರಮ ನಿರೂಪಿಸಿದರು. ವೋಟರ್ ಲಿಟರೆಸಿ ಕ್ಲಬ್‌ನ ಅಧ್ಯಾಪಕ ಸಲಹೆಗಾರರಾದ ಸ್ವಾತಿ ಬಿ. ಶೆಟ್ಟಿ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

25/01/2021 09:03 pm

Cinque Terre

4.62 K

Cinque Terre

0

ಸಂಬಂಧಿತ ಸುದ್ದಿ