ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ; ಶಾಸಕ ಡಾ.ಭರತ್ ಶೆಟ್ಟಿ ಭಾಗಿ

ಮುಲ್ಕಿ: ದೇಶದ ಅಸ್ಮಿತೆಯ ಪ್ರತೀಕವಾಗಿರುವ ಭವ್ಯ ಶ್ರೀ ರಾಮ ಮಂದಿರವನ್ನು ಭಗವಂತ ಶ್ರೀ ರಾಮಚಂದ್ರನ ಜನ್ಮಸ್ಥಾನವಾಗಿರುವ ಅಯೋಧ್ಯೆಯಲ್ಲಿ ಕಣ್ತುಂಬಿಕೊಳ್ಳಲು ದೇಶದ ಪ್ರಜೆಗಳು ಕಾತರದಿಂದ ಕಾಯುತ್ತಿದ್ದಂತೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಪರಿವಾರದ ಕಾರ್ಯಕರ್ತರು ನಿಧಿ ಸಮರ್ಪಣೆ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ.

ಈ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಾಸಕ ಡಾ‌.ವೈ. ಭರತ್ ಶೆಟ್ಟಿಯವರು ಸೋಮವಾರ ಕೂಡ ಸುರತ್ಕಲ್ ಪರಿಸರದಲ್ಲಿ ಮನೆ- ಮನೆಗೆ ತೆರಳಿ ನಿಧಿ ಸಮರ್ಪಣಾ ಅಭಿಯಾನದಲ್ಲಿ ತೊಡಗಿಸಿಕೊಂಡರು.

ಶಾಸಕರ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾ ನಗರ ಸಂಪರ್ಕ ಪ್ರಮುಖ್ ಜಯಪ್ರಕಾಶ್ ಸೂರಿಂಜೆ, ಸಂಘದ ಪ್ರಮುಖರಾದ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

19/01/2021 07:50 pm

Cinque Terre

4.59 K

Cinque Terre

1

ಸಂಬಂಧಿತ ಸುದ್ದಿ