ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಶ್ಯಾಡೋ ಲೀಫ್ ಆರ್ಟ್ ನಲ್ಲಿ ವಿಶ್ವಮಾನ್ಯ ಸ್ವಾಮಿ ವಿವೇಕಾನಂದ 'ದರ್ಶನ'

ಮಂಗಳೂರು: ಕಲಾವಿದನೋರ್ವನಿಗೆ ವಿಶಿಷ್ಟ ಕಲ್ಪನೆಯಿದ್ದಲ್ಲಿ ಯಾವ ರೀತಿ ಬೇಕಾದರೂ ಕಲಾಕೃತಿ ಮೂಡಲು ಸಾಧ್ಯ ಎಂಬುದಕ್ಕೆ ಈ ವೀಡಿಯೊ ನಿದರ್ಶನ. ಕೇವಲ ಇಂಗು ಎಲೆ ಹಾಗೂ ಪೊರಕೆ ಕಡ್ಡಿಯಲ್ಲಿ ವಿಶಿಷ್ಟವಾಗಿ ಸ್ವಾಮಿ ವಿವೇಕಾನಂದರ ಪಡಿಯಚ್ಚು ಚಿತ್ರಿತವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಸುಳ್ಯದ ಶಶಿ ಅಡ್ಕರ್ ಎಂಬ ಯುವ ಕಲಾವಿದ ಈ ಕಲಾಕೃತಿ ರಚಿಸಿದ್ದಾರೆ. ಇಂಗು ಎಲೆಯನ್ನು ವಿಶಿಷ್ಟ ರೀತಿ ಕತ್ತರಿಸಿ ಪೊರಕೆ ಕಡ್ಡಿಗೆ ಅಂಟಿಸಿ, ಹೊಯ್ಗೆ ತುಂಬಿಸಿದ ಪಾಟ್ ನಲ್ಲಿ ಸಿಕ್ಕಿಸಲಾಗಿದೆ‌‌. ಸಾಮಾನ್ಯವಾಗಿ ನೋಡುವಾಗ ಏನೋ ಐದು ಕಡ್ಡಿಗಳನ್ನು ಪಾಟ್ ನಲ್ಲಿ ನೇರವಾಗಿ ನಿಲ್ಲಿಸಿದಂತೆ ಕಂಡರೂ, ಒಂದು ಬದಿಯಲ್ಲಿ ನೋಡಿದಾಗ ಸ್ವಾಮಿ ವಿವೇಕಾನಂದರ ಚಿತ್ರ ಸ್ಪಷ್ಟವಾಗಿ ಕಾಣುತ್ತದೆ. ಇದನ್ನು ಸುಂದರವಾಗಿ ವೀಡಿಯೊ ಮಾಡಲಾಗಿದ್ದು, ಈ ವೀಡಿಯೊ ಇದೀಗ ಎಲ್ಲರ ವಾಟ್ಸ್ಆ್ಯಪ್ ಸ್ಟೇಟಸ್, ಫೇಸ್ ಬುಕ್ ಗೋಡೆಗಳಲ್ಲಿಯೂ ರಾರಾಜಿಸುತ್ತಿದ್ದು, ಸಾಕಷ್ಟು ವೈರಲ್ ಆಗಿದೆ.

ವಿಶ್ವಮಾನ್ಯ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆ ನಿನ್ನೆಯಷ್ಟೇ ಆಚರಿಸಲಾಗಿದ್ದು, ಈ ಶುಭ ಸಂದರ್ಭಕ್ಕಾಗಿ ಕಲಾವಿದ ಶಶಿ ಅಡ್ಕರ್ ಈ ಅಪರೂಪದ ಕಲಾಕೃತಿ ರಚಿಸಿದ್ದಾರೆ‌.

ಕಲಾವಿದ ಶಶಿ ಅಡ್ಕರ್ ಹೇಳುವಂತೆ ಐದು ಗಂಟೆಯ ಪರಿಶ್ರಮದಲ್ಲಿ ಈ ಕಲಾಕೃತಿ ಸೃಷ್ಟಿಯಾಗಿದೆ‌.‌ ಮೊದಲಿಗೆ ವಿವೇಕಾನಂದರ ಚಿತ್ರವನ್ನು ಡ್ರಾಯಿಂಗ್ ಮಾಡಿ, ಅದೇ ರೀತಿಯಲ್ಲಿ ಇಂಗಿನ ಎಲೆಯನ್ನು ವಿಶೇಷ ರೀತಿಯಲ್ಲಿ ಕತ್ತರಿಸಿ ಪೊರಕೆ ಕಡ್ಡಿಗಳಿಗೆ ಅಂಟಿಸಲಾಗಿದೆ. ಈ ಕಡ್ಡಿಗಳನ್ನು ಎದುರು-ಬದುರಾಗಿ ಹೊಯ್ಗೆ ತುಂಬಿದ ಪಾಟ್ ನಲ್ಲಿ ನೇರವಾಗಿ ನಿಲ್ಲಿಸಲಾಗಿದೆ.

ನೋಡುವಾಗ ಏನೋ ಕಡ್ಡಿಗಳನ್ನು ನಿಲ್ಲಿಸಿದಂತೆ ಕಂಡರೂ ಒಂದು ಪೋಸ್ ನಲ್ಲಿ ನೋಡುವಾಗ ವಿವೇಕಾನಂದರ ಸುಂದರ ಚಿತ್ರ ಗೋಚರವಾಗುತ್ತದೆ‌‌. ಅಲ್ಲದೆ, ಶ್ಯಾಡೋ ಮೂಲಕವೂ ವಿವೇಕಾನಂದರ ಚಿತ್ರ ಕಾಣುತ್ತದೆ. ಈ ಕಲಾಕೃತಿ ರಚಿಸಲು ಶಶಿ ಅಡ್ಕರ್ ಅವರಿಗೆ ವಿದೇಶಿ ಕಲಾಕಾರರೊಬ್ಬರ ನಟ್- ಬೋಲ್ಟ್ ನಿಂದ ರಚಿಸಿದ ಕಲಾಕೃತಿ ಪ್ರೇರಣೆಯೆಂದು ಹೇಳುತ್ತಾರೆ. ಈ ರೀತಿ ರಚಿಸಿರುವ ಸ್ವಾಮಿ ವಿವೇಕಾನಂದರ ಕಲಾಕೃತಿಯನ್ನು ಅಷ್ಟೇ ಸೊಗಸಾಗಿ ವೀಡಿಯೊ ಚಿತ್ರೀಕರಿಸಿ, ವಿವೇಕಾನಂದರ ಚಿಕಾಗೋ ಭಾಷಣದ ಮಾತನ್ನು ಅಚ್ಚುಕಟ್ಟಾಗಿ ಎಡಿಟ್ ಮಾಡಲಾಗಿದೆ.

Edited By : Nirmala Aralikatti
Kshetra Samachara

Kshetra Samachara

13/01/2021 11:43 am

Cinque Terre

5.23 K

Cinque Terre

0

ಸಂಬಂಧಿತ ಸುದ್ದಿ