ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದಸ್ವರ ವಾದಕ ಲಿಂಗಪ್ಪ ಸೇರಿಗಾರ್ ಗೆ ಸನ್ಮಾನ

ಮುಲ್ಕಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ನಾದಸ್ವರ ವಾದಕ ಲಿಂಗಪ್ಪ ಶೇರಿಗಾರ್ ಅವರಿಗೆ ಕಟೀಲು ದೇಗುಲದ ಸಿಬಂದಿ ವತಿಯಿಂದ ಬಂಗಾರದ ಪದಕ ನೀಡಿ ಗೌರವಿಸಲಾಯಿತು.

ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಮಾತನಾಡಿ, ಕಟೀಲು ದೇಗುಲದಲ್ಲಿ ಮೂರು ದಶಕಗಳಿಂದ ನಾದಸ್ವರ ವಾದಕರಾಗಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದು ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದು ಕಟೀಲಿಗೂ ಹೆಮ್ಮೆ ಎಂದು ಹೇಳಿದರು.

ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ ಹಾಗೂ ಉಮೇಶ ರಾವ್ ಎಕ್ಕಾರು, ಕೊಡೆತ್ತೂರುಗುತ್ತು ಬಿಪಿನ್ ಪ್ರಸಾದ ಶೆಟ್ಟಿ, ದೇಗುಲದ ಪ್ರಬಂಧಕ ತಾರಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

10/01/2021 06:16 pm

Cinque Terre

9.68 K

Cinque Terre

0

ಸಂಬಂಧಿತ ಸುದ್ದಿ