ಮುಲ್ಕಿ: ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಸಂಬಂಧಿಸಿದ ಹಾಗೂ ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಬಾಂಧವರ ಸಾಮೂಹಿಕ ದೈವಾರಾಧನೆಯ ಸಾನಿಧ್ಯ ಹಳೆಯಂಗಡಿ ಸಮೀಪದ ಪಡುಪಣಂಬೂರು ಶ್ರೀ ನಾಲ್ಕೂರು ಪಂಜುರ್ಲಿ,ಕಲ್ಕುಡ, ಗುಳಿಗ ದೈವಗಳ ವಾರ್ಷಿಕ ನೇಮೋತ್ಸವ ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆನೆಗುಂದಿ ಮಹಾಸಂಸ್ಥಾನ ಮಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು, ದೈವಸ್ಥಾನಕ್ಕೆ ದಾನಿಗಳು ಒದಗಿಸಿದ ನೂತನ ಜನರೇಟರ್ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿ, ಭಗವಂತನನ್ನು ಆರಾಧಿಸುವುದರ ಮೂಲಕ ಜೀವನದಲ್ಲಿ ನೆಮ್ಮದಿ ಸಾಧ್ಯ.
ನಂಬಿಕೆ, ವಿಶ್ವಾಸ ಹಾಗೂ ಪರಸ್ಪರ ಸಹಾಯಹಸ್ತದಿಂದ ಉತ್ತಮ ಬದುಕು ಸಾಧ್ಯ ಎಂದರು.
ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ದಾನಿಗಳು ಒದಗಿಸಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ಬಿ. ಜಗದೀಶ ಆಚಾರ್ಯ ಮಾತನಾಡಿದರು.
ದೈವಸ್ಥಾನದ ಒಂದನೇ ಮೊಕ್ತೇಸರ ಎಚ್. ಭುಜಂಗ ಆಚಾರ್ಯ, ಗೌರವಾಧ್ಯಕ್ಷ ಬಿ. ಸೂರ್ಯಕುಮಾರ್, ಎರಡನೇ ಮೊಕ್ತೇಸರ ವೈ. ಅನಂತಯ್ಯ ಆಚಾರ್ಯ, ಕಾರ್ಯದರ್ಶಿ ಪಿ. ಜಗದೀಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಕೆ.ಚಂದ್ರಶೇಖರ ಆಚಾರ್ಯ, ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಬಳಿಕ ಪಂಜುರ್ಲಿ, ಕಲ್ಕುಡ, ಗುಳಿಗ ದೈವಗಳ ನೇಮೋತ್ಸವ ನಡೆಯಿತು.
Kshetra Samachara
30/12/2020 08:55 am