ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಅನಧಿಕೃತ ಬ್ಯಾನರ್

ಮಂಗಳೂರು: ಲೈಟ್ ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರ ರಾಮ ಶೆಟ್ಟಿ ವೃತ್ತವೆಂದು ಮರುನಾಮಕರಣ ಮಾಡಿ ವಿವಾದವಾಗಿರುವ ಬೆನ್ನಲ್ಲೇ ನಗರದ ಲೇಡಿಹಿಲ್ ವೃತ್ತಕ್ಕೆ ಅನಧಿಕೃತವಾಗಿ ಬ್ರಹ್ಮಶ್ರೀ ನಾರಾಯಣಗುರು ವೃತ್ತವೆಂದು ಬ್ಯಾನರ್ ಅಳವಡಿಸಿರುವ ಘಟನೆಯೊಂದು ನಡೆದಿದೆ‌. ಆದರೆ ಬ್ಯಾನರ್ ಅಳವಡಿಸಿರುವ ಕೇವಲ ಅರ್ಧ ಗಂಟೆಯಲ್ಲಿಯೇ ತೆಗೆಯಲಾಗಿದೆ‌.

ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಮಾಡಬೇಕೆಂದು ಬಹಳ ಕಾಲದಿಂದ ಬೇಡಿಕೆಗಳು ಬರುತ್ತಿವೆ. ಬಿರುವೆರ್ ಕುಡ್ಲ ಫ್ರೆಂಡ್ಸ್ ಬಲ್ಲಾಳ್ ಬಾಗ್ ಸಂಘಟನೆಯು ಶಾಸಕರಿಗೂ ಈ ಬಗ್ಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಮಂಗಳೂರು ಕೆಥೋಲಿಕ್ ಸಭಾ ಸೇರಿದಂತೆ ಕ್ರೈಸ್ತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಮಧ್ಯೆ ನಾರಾಯಣಗುರು ವೃತ್ತ ಎಂದು ಮರುನಾಮಕರಣ ಮಾಡಿರುವ ಬ್ಯಾನರ್ ಲೇಡಿಹಿಲ್ ವೃತ್ತದಲ್ಲಿ ಪ್ರತ್ಯಕ್ಷವಾಗಿದೆ.

Edited By :
Kshetra Samachara

Kshetra Samachara

24/09/2020 07:01 pm

Cinque Terre

4.72 K

Cinque Terre

1

ಸಂಬಂಧಿತ ಸುದ್ದಿ