ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಳಲಿ: ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ 72 ಗಂಟೆ ಅಹೋರಾತ್ರಿ ಏಕಾಹ ಭಜನೋತ್ಸವ

ಬಂಟ್ವಾಳ: ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಓಂಕಾರ ಶ್ರೀ ಅಖಿಲೇಶ್ವರ ಭಜನಾ ಮಂಡಳಿ ವತಿಯಿಂದ ಪಂಚಮ ವರ್ಷದ 72 ಗಂಟೆಗಳ ಅಹೋರಾತ್ರಿ ಏಕಾಹ ಭಜನಾ ಮಹೋತ್ಸವದ ಸಮಾವೇಶಕ್ಕೆ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಆರ್ ಎಸ್ ಎಸ್ ಪ್ರಮುಖ ಡಾ. ಪ್ರಭಾಕರ ಭಟ್ ಕಲ್ಲಡ್ಕ ಸಹಿತ ಗಣ್ಯರು ಪಾಲ್ಗೊಂಡರು.

ಶನಿವಾರ ಬೆಳಿಗ್ಗೆ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಹಾಗೂ ಕೊಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ ದೀಪ ಬೆಳಗಿಸಿ ಭಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಭಜನಾ ಮಂಡಳಿ ಗೌರವಾಧ್ಯಕ್ಷ ಕೆ. ರಾಮ್ ಭಟ್ ಪೊಳಲಿ,ಬೆಂಜನಪದವು ರಮೇಶ್ ದೇವಿ ಪಾತ್ರಿ, ಶ್ರೀ ಕ್ಷೇ. ಧ.ಗ್ರಾ.ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ,ಬಂಟ್ವಾಳ ಘಟಕ ಯೋಜನಾಧಿಕಾರಿ ಜಯಾನಂದ ಪಿ.,ಮೇಲ್ವಿಚಾರಕಿ ಮಮತಾ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಯದರ್ಶಿ ಜಯರಾಮ್ ನೆಲ್ಲಿತ್ತಾಯ, ರಘುನಾಥ ಉಳ್ಳಾಲ, ವೆಂಕಟೇಶ್ ನಾವಡ ಪೊಳಲಿ ಭಾಗವಹಿಸಿದ್ದರು.

ಅರ್ಚಕ ವಾಸುದೇವ ಮಯ್ಯ ಅವರನ್ನು ಗೌರವಿಸಲಾಯಿತು. ಭಜನಾ ಮಂಡಳಿ ಅಧ್ಯಕ್ಷ ಯಶೋಧರ ಅಡ್ಡೂರು, ಪದಾಧಿಕಾರಿಗಳು ಹಾಜರಿದ್ದರು.

Edited By : Nirmala Aralikatti
Kshetra Samachara

Kshetra Samachara

14/12/2020 06:04 pm

Cinque Terre

4.77 K

Cinque Terre

0

ಸಂಬಂಧಿತ ಸುದ್ದಿ