ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲಯನ್ಸ್ ನಿಂದ ' ದೀಪಜ್ಯೋತಿ' ದೀಪಾವಳಿ ಸಂಭ್ರಮ; ನಾನಾ ಸ್ಪರ್ಧೆ

ಮುಲ್ಕಿ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317D "ದೀಪಜ್ಯೋತಿ" ಜಿಲ್ಲಾ ದೀಪಾವಳಿ ಸಂಭ್ರಮ- 2020 ಕಾರ್ಯಕ್ರಮ ಮಂಗಳೂರಿನ ಮಂಗಳಾದೇವಿಯ ರಮ್ಯಾ ಲಕ್ಷ್ಮೀನಾರಾಯಣ ಸಭಾ ಭವನದಲ್ಲಿ ಜರುಗಿತು.

ಈ ಸಂದರ್ಭ ಜಿಲ್ಲೆಯ ಲಯನ್ಸ್ ಕ್ಲಬ್ ಸದಸ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಲ್ಲೆಯ ಅನೇಕ ಲಯನ್ ಬಂಧುಗಳು ಸ್ಪರ್ಧಾಕೂಟದಲ್ಲಿ ಭಾಗವಹಿಸಿದರು. ಗ್ರಾಮೀಣ ಪ್ರದೇಶದ ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್ ಸದಸ್ಯರು ಅಧ್ಯಕ್ಷ ಲಯನ್ ಸ್ಟ್ಯಾನಿ ಪಿಂಟೋ ನೇತೃತ್ವದಲ್ಲಿ ಗೂಡುದೀಪ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ತುಳುನಾಡು ಸಂಸ್ಕೃತಿಯ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡಿದ್ದರು.

ಗೂಡುದೀಪ ಸ್ಪರ್ಧೆಯಲ್ಲಿ ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆಯಿತು. ಲಯನ್ ಸದಸ್ಯರಾದ ಪ್ರಕಾಶ್ ಆಚಾರ್ಯ ವೀಳ್ಯದೆಲೆಯಿಂದ ತಯಾರಿಸಿದ ಗೂಡುದೀಪ ಜನರ ಗಮನ ಸೆಳೆಯಿತು.

ಸಾಂಪ್ರದಾಯಿಕ ಉಡುಗೆ ಸ್ಪರ್ಧೆಯಲ್ಲಿ ಲಯನ್ ಸ್ಟ್ಯಾನಿ ಪಿಂಟೋ ಪ್ರಥಮ ಸ್ಥಾನ ಪಡೆಯುವ ಮೂಲಕ ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್ ಜಿಲ್ಲಾ ಮಟ್ಟದಲ್ಲಿ ಮೂರು ಬಹುಮಾನ ಪಡೆಯಿತು.

ಸದಸ್ಯರಾದ ಬೆಲ್ಚರ್, ದಯಾನಂದ ರೈ, ಗಂಗಾಧರ್, ಕಾರ್ಯದರ್ಶಿ ಚಂದ್ರಶೇಖರ ಮತ್ತಿತರರು ಭಾಗವಹಿಸಿದ್ದರು.

ಲಯನ್ಸ್ ಜಿಲ್ಲಾ ರಾಜ್ಯಪಾಲರು ವಿಜೇತರಿಗೆ ಬಹುಮಾನ ವಿತರಿಸಿದರು. ಗೋ ಪೂಜೆ ಜರುಗಿತು.

Edited By : Nagaraj Tulugeri
Kshetra Samachara

Kshetra Samachara

14/12/2020 08:59 am

Cinque Terre

2.73 K

Cinque Terre

0

ಸಂಬಂಧಿತ ಸುದ್ದಿ