ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಪದಗ್ರಹಣ

ಬಂಟ್ವಾಳ: ಬಂಟ್ವಾಳ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಪದಗ್ರಹಣ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಈ ವರ್ಷ ಸೇವೆಯಿಂದ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಫೆಲಿಕ್ಸ್ ಡಿಸೋಜ ಅಗ್ರಾರ್, ಜಗನ್ನಾಥ ಶೆಟ್ಟಿ ಕಕ್ಕೆಪದವು, ಚಂದ್ರಿಕ ನಾವೂರು, ಸುಮಂಗಲಿ ಸೂರ್ಯ, ಗಂಗಮ್ಮ ಪುಣಚ, ನಂದಿನಿ ಬಾಯಿ ಬಂಟ್ವಾಳ ಹಾಗೂ ಇಸಿಒ ಆಗಿದ್ದ ಸುಶೀಲ ಮಂಚಿ, ಸಂಘದ ಅಧ್ಯಕ್ಷರಾಗಿದ್ದ ರಮಾನಂದ ನೂಜಿಪ್ಪಾಡಿ ಸಿದ್ದಕಟ್ಟೆ ಮತ್ತು ಕಾರ್ಯದರ್ಶಿಯಾಗಿದ್ದ ಅನಿಲ್ ವಡಗೇರಿ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಮ್.ಪಿ ವಹಿಸಿದ್ದರು. ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕರ್ನಾಟಕ ಪ್ರೌಢ ಶಾಲೆ ಮಾಣಿ ಮುಖ್ಯ ಶಿಕ್ಷಕರಾದ ಬಿ.ಕೆ ಭಂಡಾರಿ, ಉಪಾಧ್ಯಕ್ಷ ರಾಧಾಕೃಷ್ಣ ಭಟ್ ಪೊಳಲಿ ಮತ್ತು ಸಿಸ್ಟರ್ ನವೀನ ಕಾರ್ಮೆಲ್ ಮೊಡಂಕಾಪು, ಕಾರ್ಯದರ್ಶಿ ಕಿರಣ್ ಕುಮಾರ್ ವಿಟ್ಲ, ಜತೆ ಕಾರ್ಯದರ್ಶಿ ಜಯರಾಮ ರೈ ಜೇಸಿಸ್ ವಿಟ್ಲ , ಕೋಶಾಧಿಕಾರಿ ರಮಾ ಭಂಡಾರಿ ಪಾಣೆಮಂಗಳೂರು ಮತ್ತು ನೂತನ ತಂಡದ ಸದಸ್ಯರನ್ನು ಅಭಿನಂದಿಸಿ ಶುಭ ಹಾರೈಸಿದರು.

Edited By : Vijay Kumar
Kshetra Samachara

Kshetra Samachara

06/12/2020 04:13 pm

Cinque Terre

2.61 K

Cinque Terre

0

ಸಂಬಂಧಿತ ಸುದ್ದಿ