ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಕೊಯ್ಲದ ಕೈತ್ರೋಡಿಯಲ್ಲಿರುವ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಡಿ.15ರಂದು ರಾಧಾಕೃಷ್ಣ ಭಟ್ ಪೆದಮಲೆ ನೇತೃತ್ವದಲ್ಲಿ ವೇ.ಮೂ.ಸುಬ್ರಹ್ಮಣ್ಯ ಪರಾಡ್ಕರ್ ಗುಂಡ್ಯಡ್ಕ ಪೌರೋಹಿತ್ಯದಲ್ಲಿ ಚಂಡಿಕಾ ಯಾಗ ನಡೆಯಲಿದೆ.
ಈ ಸಂದರ್ಭ ಪೂರ್ಣಾಹುತಿ ವೇಳೆ ಮಹರ್ಷಿವಾಣಿ ಖ್ಯಾತಿಯ ಡಾ. ಆನಂದ ಗುರೂಜಿ ಮತ್ತು ಶ್ರೀ ಕ್ಷೇತ್ರ ಕಟೀಲಿನ ವೇ.ಮೂ.ಕಮಲಾದೇವಿ ಆಸ್ರಣ್ಣ ಉಪಸ್ಥಿತರಿರುವರು ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೈತ್ರೋಡಿ ಕ್ವಾರ್ಟಸ್ ನ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಲೋಕೇಶ್ ತಿಳಿಸಿದರು.
ಇದೇ ವೇಳೆ ಕೊರಗಜ್ಜ ಭಕ್ತಿಗೀತೆ ಹಾಡಿದ ಬಾಲಪ್ರತಿಭೆ ಕಾರ್ತಿಕ್ ಕಾರ್ಕಳ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ತುಳು ನಾಟಕ ಪನಿಯೆರೆ ಆವಂದಿನ ನಡೆಯಲಿದೆ.
19ರಂದು ಶನಿವಾರ ಮಂತ್ರದೇವತೆ ಮತ್ತು ಕೊರಗಜ್ಜ ದೈವಗಳಿಗೆ ವರ್ಷಾವಧಿ ಕೋಲ ನಡೆಯಲಿರುವುದಾಗಿ ಅವರು ಹೇಳಿದ್ದು, ಈ ಸಂದರ್ಭ ರಾತ್ರಿ ಕಟೀಲು ಮೇಳದಿಂದ ಶ್ರೀದೇವಿ ಮಹಾತ್ಮೆ ಬಯಲಾಟ ನಡೆಯಲಿರುವುದಾಗಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಜಿ ವಲಯಾಧ್ಯಕ್ಷ ಚಂದಪ್ಪ ಪೂಜಾರಿ ಉಪಸ್ಥಿತರಿದ್ದರು.
Kshetra Samachara
05/12/2020 04:07 pm