ಕಡಬ: ಸುದೀರ್ಘ 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆಯ ನಂತರ ಜಮ್ಮು ಕಾಶ್ಮೀರದಿಂದ ಸೇವಾ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಸಂತೋಷ್ ತೋಮಸ್ ಅವರಿಗೆ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ಕೋಡಿಂಬಾಳ ವತಿಯಿಂದ ಅಭಿನಂದನಾ ಕಾರ್ಯಕ್ರಮ ಇಂದು ದಿವ್ಯ ಬಲಿ ಪೂಜೆಯ ನಂತರ ಕೋಡಿಂಬಾಳ ಚರ್ಚ್ ನಲ್ಲಿ ನಡೆಯಿತು.
ಕೋಡಿಂಬಾಳ ಸಂತ ಜಾರ್ಜ್ ಚರ್ಚ್ ಧರ್ಮಗುರು ವಂದನೀಯ ರೆವರೆಂಡ್ ಫಾದರ್ ಡ್ಯಾನಿಯೆಲ್ ಕಡಂಕಂಪಳ್ಳಿ ಅವರು ಸಂತೋಷ್ ತೋಮಸ್ ಅವರಿಗೆ ಹಾಗೂ ಅವರ ಕುಟುಂಬಕ್ಕಾಗಿ ಬಲಿಪೂಜೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂತೋಷ್ ತೋಮಸ್ ಅವರಿಗೆ ಶಾಲು ಹೊದಿಸಿ, ಪೇಟಾ ಮತ್ತು ಫಲಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಚರ್ಚ್ ಆಡಳಿತ ಟ್ರಸ್ಟಿ ಜೋಸ್ ತೆಕ್ಕೇಪೂಕಲಂ,ಕಾರ್ಯದರ್ಶಿ ಸನೀಶ್ ಬಿ.ಟಿ,, ಆಡಳಿತ ಸಮಿತಿ ಪದಾಧಿಕಾರಿಗಳು, ಧರ್ಮಭಗಿನಿಯರು,ಸಭಾ ವಿಶ್ವಾಸಿಗಳು ಉಪಸ್ಥಿತರಿದ್ದರು.
Kshetra Samachara
22/11/2020 02:05 pm