ಬಂಟ್ವಾಳ: ಜಮಾಅತೆ ಇಸ್ಲಾಮೀ ಹಿಂದ್ ವಿಟ್ಲ, ರೋಟರಿ ಕ್ಲಬ್ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ ಹಾಗೂ ಜೇಸಿಐ ವಿಟ್ಲ ಸಹಯೋಗದಲ್ಲಿ ಸೀರತ್ ಸಂದೇಶ ಕಾರ್ಯ ಕ್ರಮ ವಿಟ್ಲದಲ್ಲಿ ನಡೆಯಿತು.
ಸೀರತ್ ಸಂದೇಶವನ್ನುಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞ ನೀಡಿದರು. ವಿಟ್ಲ ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಹೈದರ್ ಅಲಿ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ. ಗೀತಾಪ್ರಕಾಶ್, ರೋಟರಿ ವಲಯ ಸೇನಾಧಿಕಾರಿ ಜಯರಾಮ ರೈ, ಸರ್ವೋತ್ತಮ ರಾಜ್ಯ ಪ್ರಶಸ್ತಿ ಪುರಸ್ಕೃತ ಅಧಿಕಾರಿ ಹಸನ್ ವಿಟ್ಲ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಭಟ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜೆಸಿಂತಾ ಸೋಫಿಯಾ ಮಸ್ಕರೇಂಞಸ್, ವಿಟ್ಲ ಜೇಸಿಐ ಅಧ್ಯಕ್ಷ ದಿನೇಶ್ ಶೆಟ್ಟಿ, ಉಪಸ್ಥಿತರಿದ್ದರು.
Kshetra Samachara
12/11/2020 06:22 pm