ಮುಲ್ಕಿ: ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ ಮುಲ್ಕಿಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ, ಶ್ರಮಜೀವಿಗಳನ್ನು ಗುರುತಿಸಿ ಗೌರವಿಸುತ್ತಿರುವ ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಮುಲ್ಕಿ ನ.ಪಂ. ಸದಸ್ಯ ಹರ್ಷ ರಾಜ ಶೆಟ್ಟಿ ಮಾತನಾಡಿ, ಸಮಾಜಕ್ಕೆ ತಾನೇನಾದರೂ ನೀಡಿದರೆ ಸಮಾಜ ತನ್ನನ್ನು ಗೌರವಿಸುತ್ತದೆ ಎಂಬ ಮಾತು ನಿಜವಾಗಿದ್ದು, ಸಾಧಕರನ್ನು ಗೌರವಿಸುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.
ಹೈನುಗಾರಿಕೆ ಹಾಗೂ ಬಾಣಂತಿ ಆರೈಕೆಯಲ್ಲಿ ಹಲವಾರು ವರ್ಷಗಳಿಂದ ಶ್ರಮಜೀವಿ ಯಾಗಿರುವ ವನಜಾ ಪಿ. ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೊಕ್ಕರಕಲ್ , ಮುಲ್ಕಿ ಹಿಂದೂ ಯುವ ಸೇನೆ ಮಹಿಳಾ ಮಂಡಳಿ ಅಧ್ಯಕ್ಷೆ ನೀರಜಾ ಅಗ್ರವಾಲ್, ಚಿತ್ರಾಪು ಬಾಲಲೀಲಾ ವಿಠೋಬ ಭಜನಾ ಮಂದಿರ ಅಧ್ಯಕ್ಷ ವಾಸು ಪೂಜಾರಿ, ನಿವೃತ್ತ ಪ್ರಾಂಶುಪಾಲ ವೈ.ಎನ್. ಸಾಲ್ಯಾನ್, ವಾಮನ ಕೋಟ್ಯಾನ್ ನಡಿಕುದ್ರು, ರವಿಚಂದ್ರ, ಹೊಸ ಅಂಗಣ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಪಿ.ಸಾಲಿಯಾನ್, ಅಬ್ದುಲ್ ರಜಾಕ್ , ಪದ್ಮನಾಭ ಕೋಟ್ಯಾನ್, ಜಾನ್ ಕ್ವಾಡ್ರಸ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೊಸ ಅಂಗಣ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
Kshetra Samachara
31/10/2020 12:14 pm