ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಚಿತ್ರಾಪು ಸಾಧಕ ಶಿಕ್ಷಕಿಗೆ ಸನ್ಮಾನ

ಮೂಲ್ಕಿ: ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರನ್ನು ಗೌರವಿಸುವುದು ದೇವರ ಪೂಜೆಗೆ ಸಮನಾಗಿದೆ ಎಂದು ಮೂಲ್ಕಿ ನಗರ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್ ಹೇಳಿದರು.

ಚಿತ್ರಾಪು ಶ್ರೀ ವಿಠೋಬ ಬಾಲಲೀಲಾ ಭಜನಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರಾಪು ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಸರಿತಾ ರವರನ್ನು ಸನ್ಮಾನಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಯೋಗೀಶ್ ಕೋಟ್ಯಾನ್, ಮಂದಿರದ ಅಧ್ಯಕ್ಷ ಲೋಕೇಶ್ ಟ್ಯಾನ್,ಉಪಾಧ್ಯಕ್ಷ ಮಂಜುನಥ ಕೆ.,ಗೌರವಾಧ್ಯಕರುಗಳಾದ ಬಾಲಚಂದ್ರ ಸನಿಲ್ ಮತ್ತು ರಮೇಶ್ ಅಮೀನ್, ಕಾರ್ಯದರ್ಶಿ ರಿತೇಶ್, ಕೋಶಧಿಕಾರಿ ಪ್ರಜ್ವಲ್,ಭಜನಾ ಸಂಚಾಲಕ ಅಶೋಕ್ ಅಮೀನ್ ಉಪಸ್ಥಿತರಿದ್ದರು. ಲೋಕೇಶ್ ಕೋಟ್ಯಾನ್ ಸ್ವಾಗತಿಸಿದರು. ಗಂಗಾಧರ ಅಮೀನ್ ವಂದಿಸಿದರು.

Edited By : Nagesh Gaonkar
Kshetra Samachara

Kshetra Samachara

30/10/2020 10:33 am

Cinque Terre

3.22 K

Cinque Terre

0

ಸಂಬಂಧಿತ ಸುದ್ದಿ