ಬಂಟ್ವಾಳ: ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷ ಬಾಬು ಕೆ.ವಿ. ಅಧ್ಯಕ್ಷತೆಯಲ್ಲಿ ನಡೆಯಿತು.
ಸಾಕಷ್ಟು ಶ್ರಮ ವಹಿಸಿದ ಹಿನ್ನೆಲೆಯಲ್ಲಿ ಸಂಘವು ಈ ಸ್ಥಿತಿಗೆ ಬಂದಿದ್ದು, ಮುಂದೆ ಸಂಘದ ನಿವೇಶನ ಹಾಗೂ ಸ್ವಂತ ಕಟ್ಟಡಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಿ ಕಟ್ಟಡ ನಿರ್ಮಾಣಗೊಂಡರೆ ಸಂಘಟನೆ ಇನ್ನೂ ಬಲಿಷ್ಠವಾಗುತ್ತದೆ. ಮುಂದೆ ಕ್ಷೇಮನಿಧಿ, ದರ ನಿಗದಿ ಕುರಿತು ಸಂಘ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಮೂಡಬಿದಿರೆ ತಾಲೂಕು ಘಟಕದ ಗಣೇಶ್ ಕಾಮತ್, ಬೆಳ್ತಂಗಡಿ ತಾಲೂಕು ಘಟಕದ ಜರ್ಮಿ ಡೇಸಾ, ಮಂಗಳೂರು ತಾಲೂಕು ಘಟಕದ ಕ್ಲೇವರ್ಡ್ ಡಿಸೋಜ, ಟೆಂಟ್ ಉದ್ಯಮಿಗಳಾದ ರಾಜೇಶ್ ಎಂ, ಅಬ್ದುಲ್ ರಶೀದ್ ಡಿ.ಎಂ, ಅಬ್ದುಲ್ ಲತೀಫ್, ಫಾರೂಕ್ ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ ವರದಿ ವಾಚಿಸಿದರು. ಕೋಶಾಧಿಕಾರಿ ಮುರಳೀಧರ ರಾವ್ ಲೆಕ್ಕಪತ್ರ ಮಂಡಿಸಿದರು.
Kshetra Samachara
20/10/2020 08:02 pm