ಮಂಗಳೂರು: ದೀಪಾವಳಿ ಹಬ್ಬದ ನಿಮಿತ್ತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಡುಮದ್ದು ಮಾರಾಟ ಮಾಡಲು ಇಚ್ಛಿಸುವವರು ಪರವಾನಿಗೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರಿಗೆ ಎಲ್‌ಇ-5ರಲ್ಲಿ ತಾತ್ಕಾಲಿಕವಾಗಿ ಸುಡುಮದ್ದು ವ್ಯಾಪಾರ ಮಾಡಲು ಪರವಾನಿಗೆ ನೀಡಲಾಗುವುದು. ಆಸಕ್ತರು ಅ.27ರ ಒಳಗೆ ಪೊಲೀಸ್ ಆಯುಕ್ತರ ಕಚೇರಿ, ಎ.ಬಿ. ಶೆಟ್ಟಿ ವೃತ್ತದ ಬಳಿ, ಮಂಗಳೂರು ನಗರ ಇವರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0824-2220803ನ್ನು ಸಂಪರ್ಕಿಸಲು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
20/10/2020 07:54 pm