ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ನಿವಾಸಿ ಮಹಿಳೆಯೋರ್ವರು ಇಬ್ಬರು ಮಕ್ಕಳೊಂದಿಗೆ ಏಕಾಏಕಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಮಹಿಳೆಯನ್ನು ಪ್ರತಿಭಾ ಯಾನೆ ಪಿಂಕಿ (27) ಎಂದು ಗುರುತಿಸಲಾಗಿದೆ. ಮಹಿಳೆ ಪ್ರತಿಭಾ ಮುಲ್ಕಿಯ ಕಾರ್ನಾಡು ಸೈಂಟ್ ಆನ್ಸ್ (ಚೇತನ) ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಎಂದಿನಂತೆ ಜೂ.4 ರಂದು ಬೆಳಿಗ್ಗೆ ಆಸ್ಪತ್ರೆಗೆ ಕೆಲಸಕ್ಕೆಂದು ಹೋಗಿದ್ದು ಆಸ್ಪತ್ರೆಗೂ ಹೋಗದೆ ಮನೆಗೂ ಬಾರದೆ ಏಕಾಏಕಿ ತನ್ನ ಇಬ್ಬರು ಮಕ್ಕಳಾದ ಪ್ರತ್ವಿನ್ ಹಾಗೂ ಸಾತ್ವಿಕ ಎಂಬವರ ಜೊತೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಹಿಳೆ ಪತಿ ಸಂದೀಪ್ ನೀಡಿದ ದೂರಿನಂತೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
05/06/2022 08:13 pm