ಬಂಟ್ವಾಳ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗಂಡು ಮಗುವಿಗೆ ಜನಿಸಿದ ಘಟನೆ ಪಾಣೆ ಮಂಗಳೂರು ಗ್ರಾಮದ ಉಪ್ಪುಗುಡ್ಡೆಯಲ್ಲಿ ನಡೆದಿದೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಅಶ್ವತ್ಥ ಎಂಬಾತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. 17 ವರ್ಷದ ಬಾಲಕಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿಕೊಂಡುತ್ತಿದ್ದಾಳೆ. ಎರಡು ವರ್ಷಗಳ ಹಿಂದೆ ಸ್ನೇಹಿತೆ ಮದುವೆ ಕಿನ್ನಿಗೋಳಿಯಲ್ಲಿ ನಡೆದಾಗ ಅಲ್ಲಿನ ಕೊಲ್ಲೂರು ವಾಸಿ ಅಶ್ವತ್ಥ ಎಂಬಾತನ ಪರಿಚಯವಾಗಿ ಮೊಬೈಲ್‌ನಲ್ಲಿ ಅನ್ಯೋನ್ಯವಾಗಿದ್ದರು.
2021ರ ಜುಲೈನಲ್ಲಿ ಆರೋಪಿಯ ಮನೆಗೆ ಬಾಲಕಿ ಹೋಗಿದ್ದಳು. ಈ ವೇಳೆ ಆರೋಪಿ ಯುವಕ ಮದುವೆಯಾಗುತ್ತೇನೆ ಎಂದು ನಂಬಿಸಿ ಬಾಲಕಿ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಕ್ಟೋಬರ್‌ನಲ್ಲೂ ಇದೇ ರೀತಿಯ ಕೃತ್ಯ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದಕ್ಕೆ ಅಶ್ವತ್ಥ್ ಕಾರಣ ಎಂದು ಆರೋಪಿಸಿ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾಳೆ.
Kshetra Samachara
19/05/2022 09:36 pm