ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪಡು ಪಣಂಬೂರು ಸಿನಿಮೀಯ ಮಾದರಿಯಲ್ಲಿ ವರ ವಧುವಿನ ಜೊತೆ ಪರಾರಿ

ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ದೇವಸ್ಥಾನವೊಂದರಲ್ಲಿ ನಡೆಯಬೇಕಾಗಿದ್ದ ಮದುವೆಯಲ್ಲಿ ವರನು ವಧುವಿನೊಂದಿಗೆ ಸಿನಿಮೀಯ ಮಾದರಿಯಲ್ಲಿಪರಾರಿಯಾಗಿದ್ದು ವರನ ವಿರುದ್ಧ ವಧುವಿನ ಮನೆಯವರು ಮುಲ್ಕಿ ಠಾಣೆಗೆ ದೂರು ನೀಡಿದ್ದಾರೆ.

ಮೂಲತಃ ತೀರ್ಥಹಳ್ಳಿ ನಿವಾಸಿ ಬಸ್ ಚಾಲಕನಾಗಿರುವ ಶಬರೀಶ್ ಎಂಬಾತನು ಹಳೆಯಂಗಡಿ ಸಮೀಪದ ಸಸಿಹಿತ್ಲು ಮೂಲದ ಪ್ರೀತಿ ಎಂಬ ಯುವತಿಯ ಜೊತೆ ಮದುವೆ ಗೊತ್ತು ಮಾಡಿದ್ದು ಪಡುಪಂಣಂಬೂರಿನ ಹೊಯಿಗೆಗುಡ್ಡೆ ದೇವಸ್ಥಾನದಲ್ಲಿ ಮದುವೆಗೆ ಸಿದ್ಧವಾಗುತ್ತಿದ್ದಂತೆ ಏಕಾಏಕಿ ಕಾರಿನಲ್ಲಿ ನಾಲ್ಕು ಜನ ಇಳಿದಿದ್ದುದನ್ನು ನೋಡಿದ ಬಸ್ಸು ಚಾಲಕ ,ಮದುಮಗ ಶಬರೀಶ್ ತಾನು ಮದುವೆಯಾಗಬೇಕಿದ್ದ ವಧು ಪ್ರೀತಿ ಜೊತೆ ಸಿನಿಮೀಯ ಮಾದರಿಯಲ್ಲಿ ಮದುವೆ ಮಂಟಪದಿಂದ ಕಾರಿನಲ್ಲಿ ಪರಾರಿಯಾಗಿದ್ದಾನೆ.

ಈ ಸಂದರ್ಭ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಕಾರಿನಿಂದ ಇಳಿದ ಮಹಿಳೆ ತನ್ನ ವಿಷಯ ತಿಳಿಸಿ ಬಸ್ ಚಾಲಕ ಶಬರೀಶ್ ಜೊತೆ ಕಳೆದ ಹತ್ತು ವರ್ಷದ ಹಿಂದೆ ತಾನು ಮದುವೆಯಾಗಿದ್ದು ತನಗೆ ಎಂಟು ವರ್ಷದ ಮಗುವಿದೆ ಎಂದು ಕಥೆ ತಿಳಿಸಿದಾಗ ಸ್ಥಳೀಯರು ಅವಕ್ಕಾಗಿ ಕೂಡಲೇ ವರನನ್ನು ಹಿಂಬಾಲಿಸುವಷ್ಟರಲ್ಲಿ ಆತ ಪರಾರಿಯಾಗಿದ್ದಾನೆ.

ಇದೀಗ ವಧುವಿನ ಮನೆಯವರು ಮುಲ್ಕಿ ಠಾಣೆಗೆ ವರ ಶಬರೀಶ್ ವಿರುದ್ಧ ಚಿನ್ನಾಭರಣ ಜೊತೆ ಪರಾರಿಯಾದ ಬಗ್ಗೆ ದೂರು ನೀಡಿದ್ದು ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಮದುವೆ ಮಂಟಪದಲ್ಲಿ ಏಕಾಏಕಿ ಮದುವೆ ರದ್ದಾಗಿದ್ದ ರಿಂದ ಮದುವೆಗೆ ಬಂದ ನೆಂಟರಿಷ್ಟರಲ್ಲಿ ಗೊಂದಲ ಏರ್ಪಟ್ಟಿದ್ದು ಮದುವೆ ಮಾಡಿಸಲು ಬಂದಿದ್ದ ಪುರೋಹಿತರು ತಮ್ಮ ಹಣವನ್ನು ವಸೂಲಿ ಮಾಡಿದ್ದಾರೆ

ಯುವತಿಯನ್ನು ಪ್ರೀತಿಯ ಅಮಲಿನಲ್ಲಿ ವಂಚಿಸಿದ ಬಸ್ ಚಾಲಕನ ವಿರುದ್ಧ ವಧುವಿನ ಮನೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
Kshetra Samachara

Kshetra Samachara

05/05/2022 10:39 pm

Cinque Terre

4.04 K

Cinque Terre

0

ಸಂಬಂಧಿತ ಸುದ್ದಿ