ಮಂಗಳೂರು: ಟಿಪ್ಪರ್ ಲಾರಿ ಹರಿದು ಸೈಕಲ್ ನಲ್ಲಿ ಆಡುತ್ತಿದ್ದ ಆರು ವರ್ಷದ ಬಾಲಕ ಮೃತಪಟ್ಟ ದುರ್ಘಟನೆ ನಗರದ ಹೊರವಲಯದ ಬಜಾಲ್ ನ ಕಟ್ಟಪುಣಿಯಲ್ಲಿ ನಡೆದಿದೆ.
ಬಜಾಲ್ ಹಟ್ಟಿ ಬಳಿಯ ಹಿದಾಯುತ್ತುಲ್ಲಾ ಎಂಬವರ ಪುತ್ರ ಮೊಹಮ್ಮದ್ ಜೀಶನ್(6) ಮೃತಪಟ್ಟ ಬಾಲಕ.
ಬಾಲಕ ಮೊಹಮ್ಮದ್ ಜೀಶನ್ ಸಾಯಂಕಾಲ ಆರು ಗಂಟೆ ಸುಮಾರಿಗೆ ಬಜಾಲ್ ಕಟ್ಟಪುಣಿ ಬಳಿ ಕೋರ್ದಬ್ಬು ದೈವಸ್ಥಾನದ ರಸ್ತೆಯ ಕೆರೆಯ ಬಳಿಯ ರಸ್ತೆಯಲ್ಲಿ ಸೈಕಲ್ ನಲ್ಲಿ ಆಟವಾಡುತ್ತಿದ್ದ. ಈ ಸಂದರ್ಭ ಆತನ ಮೇಲೆ ಟಿಪ್ಪರ್ ಹರಿದಿದೆ. ಪರಿಣಾಮ ಜೀಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
20/04/2022 08:43 pm