ಮುಲ್ಕಿ: ಹಳೆಯಂಗಡಿ ಕಿನ್ನಿಗೋಳಿ ಹೆದ್ದಾರಿಯ ಎಸ್ ಕೋಡಿ ಶಾಲೆಯ ಬಳಿ ಬೈಕಿಗೆ ಪಿಕಪ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳು ಸವಾರರನ್ನು ಸುಜಿತ್ ಸುವರ್ಣ ಎಂದು ಗುರುತಿಸಲಾಗಿದೆ ಗಾಯಾಳು ಸುಜಿತ್ ಸುವರ್ಣ ಎಸ್ ಕೋಡಿ- ಪಕ್ಷಿಕೆರೆ ಹೆದ್ದಾರಿಯಲ್ಲಿ ಬೈಕಂಪಾಡಿ ಕಡೆಗೆ ಹೋಗುತ್ತಿದ್ದಾಗ ಎಸ್ ಕೋಡಿ ರಾಮಣ್ಣ ಶೆಟ್ಟಿ ನಿಟ್ಟೆ ಮೆಮೋರಿಯಲ್ ಶಾಲೆ ಬಳಿ ಹಳೆಯಂಗಡಿ ಕಡೆಯಿಂದ ಎಸ್ ಕೋಡಿ ಕಡೆಗೆ ಬರುತ್ತಿದ್ದ ಪಿಕ್ ಅಪ್ ವಾಹನ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಸುಜಿತ್ ಸುವರ್ಣ ರವರು ಮೊಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಕುತ್ತಿಗೆ ಬಲ ಭಾಗ ಕಾಲರ್ ಬೋನು, ಪಕ್ಕೆಲಬು ಬಳಿ, ಬಲ ಕೈ ಹೆಬ್ಬೆರಳು ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಬಲಕಾಲಿನ ಮೊಣಗಂಟಿನ ಸುತ್ತ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಪಿಕಪ್ ಚಾಲಕ ಶಾರುಕ್ ವಿರುದ್ದ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
30/03/2022 10:00 pm