ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಕರಿಂಜೆಗುತ್ತು ಸಮೀಪದ ವ್ಯಕ್ತಿಯೊಬ್ಬರು ಶನಿವಾರ ಬೆಳಗ್ಗೆ ಮನೆಯ ಕೊಟ್ಟಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೈವ ಮುಕಾಲ್ದಿ, ಕರಿಂಜೆ ಗ್ರಾಮದ ಪೂವಪ್ಪ ಶೆಟ್ಟಿ ಅವರ ಮಗ ಜಯಕರ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅವರು ತಂದೆಯ ಜೊತೆ ದೈವದ ಚಾಕರಿಗೆ ಹೋಗುತ್ತಿದ್ದರು.
ಜಯಕರ್ ಅವರಿಗೆ ಪತ್ನಿ,ಪುತ್ರ, ಪುತ್ರಿ ಇದ್ದಾರೆ. ಆರು ವರ್ಷಗಳ ಹಿಂದೆ ಜಯಕರ್ ಅವರ ಅವಳಿ ಸಹೋದರ ಶುಭಕರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.
Kshetra Samachara
29/01/2022 02:13 pm