ಬಜಪೆ:ಕಂದಾವರ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ಅವರು ಗ್ರಾಪಂ ಕಚೇರಿಯಲ್ಲೇ ಪರಸ್ಪರ ಹಲ್ಲೆ ನಡೆಸಿದ ಘಟನೆ ಮಂಗಳವಾರದಂದು ನಡೆದಿದೆ.
ಘಟನೆಯನ್ನು ಖಂಡಿಸಿ ಗ್ರಾಮ ಪಂಚಾಯತ್ ನ ಸದಸ್ಯರುಗಳು ಪಿಡಿಓ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.ಕಂದಾವರ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾಡುವ ನಿರ್ಣಯದ ವಿರುದ್ದವಾಗಿ ಕೆಲಸಮಾಡುತ್ತಾರೆ ಎಂದು ಪಿಡಿಓ ವಿರುದ್ದ ಅಧ್ಯಕ್ಷರು ಹರಿಹಾಯ್ದಿದ್ದರು.ಕಾನೂನು ಮೀರಿ ಕೆಲಸ ಮಾಡಲು ಅಸಾಧ್ಯ ಎಂದು ಪಿಡಿಓ ಪ್ರತಿ ಮಾತು ಹೇಳಿದ್ದರು.ಇದಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದೆ.
ಘಟನೆ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
01/12/2021 11:45 am